ADVERTISEMENT

ಎಟಿಎಂಇ ಕಾಲೇಜಿನ ದಶಮಾನೋತ್ಸವ

ಸಂಸ್ಥಾಪಕರ ದಿನಾಚರಣೆ; ಸನ್ಮಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:50 IST
Last Updated 12 ಅಕ್ಟೋಬರ್ 2020, 8:50 IST
ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ದಶಮಾನೋತ್ಸವ ಸಮಾರಂಭದಲ್ಲಿ ಡಾ.ಶ್ರೀನಿವಾಸ್, ಪ್ರೊ.ವೀರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು
ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ದಶಮಾನೋತ್ಸವ ಸಮಾರಂಭದಲ್ಲಿ ಡಾ.ಶ್ರೀನಿವಾಸ್, ಪ್ರೊ.ವೀರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು   

ಮೈಸೂರು: ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ದಶಮಾನೋತ್ಸವ ಸಮಾರಂಭ ಹಾಗೂ ಸಂಸ್ಥಾಪಕರ ದಿನ’ವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಗೌರವಾಧ್ಯಕ್ಷ ಎಲ್.ಅರುಣ್ ಕುಮಾರ್, ಗೌರವ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಆಡಳಿತ ಮಂಡಳಿಯ ಸಂಸ್ಥಾಪಕ ಸದಸ್ಯರಾದ ಧೀರೇಂದ್ರಕುಮಾರ್ ಆರ್.ಮೆಹ್ತಾ, ಆಡಳಿತ ಮಂಡಳಿ ಟ್ರಸ್ಟಿ ನೂರೈನ್, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ.ಶ್ರೀನಿವಾಸ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿ ಯರಿಂಗ್ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ವೀರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಲ್.ಅರುಣ್‍ಕುಮಾರ್ ‘ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ. ಸಮಾಜದಿಂದ ನಾವು ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಆದ್ದರಿಂದ ಸಮಾಜಕ್ಕೆ ನಾವು ಏನಾದರು ಕೊಡುಗೆ ಕೊಡಬೇಕು ಎಂಬ ಆಶಯದಿಂದ ಎಟಿಎಂಇ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದೆವು. ಈ ಹತ್ತು ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇವೆ. ಆದರೆ, ಎಂದಿಗೂ ವಿದ್ಯಾರ್ಥಿಗಳಿಗೆ ನೀಡುವ ಶೈಕ್ಷಣಿಕ ಗುಣಮಟ್ಟದಲ್ಲಿ ರಾಜಿಯಾಗಿಲ್ಲ’ ಎಂದರು.

ADVERTISEMENT

‘ಸಂಸ್ಥೆಯ ಬೆಳವಣಿಗೆಯ ಹಿಂದೆ ಅನೇಕರ ಪರಿಶ್ರಮ, ಸಹಕಾ ರವಿದೆ ಅವರೆಲ್ಲರಿಗೂ ನಾವು ಆಭಾರಿ ಯಾಗಿ ದ್ದೇವೆ. ‘ಸಮಗ್ರ’ ಹೆಸರಿನಡಿ ಮತ್ತೊಂದು ಸಂಸ್ಥೆ ಸ್ಥಾಪಿಸಿ ಆ ಮೂಲಕ ಉನ್ನತ ಶಿಕ್ಷಣ ವಿಭಾಗಗಳನ್ನು ಆರಂಭಿಸಬೇಕೆನ್ನುವ ಗುರಿ ಹೊಂದಿದ್ದೇವೆ’ ಎಂದರು.

ದಶಮಾನೋತ್ಸವ ಸವಿನೆನಪಿಗಾಗಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ ಗಳ ವಿವಿಧ ಚಟುವಟಿಕೆಗಳ ಉಪಯೋ ಗಕ್ಕಾಗಿ ನಿರ್ಮಿಸಲಿರುವ ‘ಆಂಪಿ ಥಿಯೇಟರ್’ ಕುರಿತ ನೀಲನಕ್ಷೆ ಪ್ರದರ್ಶಿಸಿ ಆ ಬಗ್ಗೆ ಮಾಹಿತಿ ನೀಡಲಾಯಿತು.

ಡಾ.ಸಯ್ಯದ್ ಶಕೀಬ್-ಉರ್-ರಹಮಾನ್ ಅತಿಥಿಯಾಗಿ ಪಾಲ್ಗೊಂಡ ರು. ಕಾಲೇಜಿನ ಡೀನ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು, ಕಾರ್ಯಕ್ರಮ ಸಂಯೋಜಕ ಡಾ.ರತ್ನಾಕರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.