ಮೈಸೂರು: ದಕ್ಷಿಣ ಕನ್ನಡದ ಅನ್ಶುಲ್ ಹಾಗೂ ಕೊಡಗಿನ ಜೀವಿತಾ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಗೂ ಮಹಾರಾಜ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನ ಬಾಲಕ ಹಾಗೂ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಜಯ ಗಳಿಸಿದರು.
ಶಾಲಾ ಶಿಕ್ಷಣ (ಪಿಯು) ಇಲಾಖೆ ಹಾಗೂ ರಾಮಕೃಷ್ಣ ವಿದ್ಯಾಶಾಲಾ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅನ್ಶುಲ್ 15–10, 15–11 ಪಾಯಿಂಟ್‌ಗಳಿಂದ ಚಿತ್ರದುರ್ಗದ ವೀರೇಶ್ ಅವರನ್ನು ಮಣಿಸಿದರೆ, ಜೀವಿತಾ 15–7, 15–6ರಿಂದ ಬೀದರ್‌ನ ರಾಧಿಕಾ ವಿರುದ್ಧ ಗೆದ್ದರು.
ಫಲಿತಾಂಶ:
ಬಾಲಕರ ಸಿಂಗಲ್ಸ್ : ಚಿಕ್ಕಮಗಳೂರಿನ ಸುಶಾಂತ್ 13–15, 15–10, 15–9ರಿಂದ ತುಮಕೂರಿನ ಅಭಯ್ ಎದುರು, ಗದಗಿನ ಖಲೀದ್ 15–11, 15–10ರಿಂದ ಹಾವೇರಿಯ ಆದಿತ್ಯ ಎದುರು, ರಾಮನಗರದ ತನೀಶ್ 15–10, 15–10ರಿಂದ ಪಾಂಡ್ಯ ಎದುರು, ಕೊಡಗಿನ ಅಯ್ಯಪ್ಪ 15–3, 15–5ರಿಂದ ವಿಜಯನಗರದ ಶಶ್ರಿಕ್ ಎದುರು, ಬಳ್ಳಾರಿಯ ಕೃಷ್ಣ 15–3, 15–10ರಿಂದ ಕೊಪ್ಪಳದ ಭರತ್ ಎದುರು, ಬೆಂಗಳೂರು ದಕ್ಷಿಣದ ಧ್ಯಾನ್ 15–5, 15–0ರಿಂದ ದಾವಣಗೆರೆಯ ಅಕ್ಷಯ್ ಎದುರು, ಬೆಂಗಳೂರು ಉತ್ತರದ ಜೋಸೆಫ್ 15–5, 15–7ರಿಂದ ಮಂಡ್ಯದ ಸಂಜಯ್ ಎದುರು, ಬೆಳಗಾವಿಯ ಅಥರ್ವ 15–11, 15–7ರಿಂದ ಕೋಲಾರ್ ಕೃಷ್ಣ ಎದುರು, ಬೆಂಗಳೂರು ಗ್ರಾಮಾಂತರದ ತಿರುಮಲೇಶ್ 16–14, 15–8ರಿಂದ ಚಾಮರಾಜನಗರದ ಕ್ರಿಶ್ ಎದುರು ಜಯಿಸಿದರು.
ಬಾಲಕಿಯರ ಸಿಂಗಲ್ಸ್: ಬೆಂಗಳೂರು ಉತ್ತರದ ಮಾನ್ವಿತಾ 15–7, 15–6ರಿಂದ ಉಡುಪಿಯ ಅವನಿ ಎದುರು, ಬೆಳಗಾವಿಯ ಮೋಕ್ಷಿತಾ 15–1, 15–2ರಿಂದ ಚಿಕ್ಕಬಳ್ಳಾಪುರದ ಸ್ತುತಿ ಕಿತ್ತೂರು ಎದುರು, ಹಾಸನದ ಹರ್ಷಿತಾ 15–7, 15–2ರಿಂದ ಕೊಪ್ಪಳದ ಸಂಕೀರ್ತನಾ ಎದುರು, ಮೈಸೂರಿನ ದಿಯಾ 15–0, 15–0ರಿಂದ ಬಳ್ಳಾರಿಯ ರಾಣಿ ಎದುರು, ಧಾರವಾಡದ ಕೀರ್ತಿ 15–8, 15–13ರಿಂದ ಉತ್ತರ ಕನ್ನಡದ ನೇಹಾ ರಾಜು ಎದುರು, ಚಿಕ್ಕೋಡಿಯ ಸಾಕ್ಷಿ 20–18, 16–14ರಿಂದ ಹಾವೇರಿಯ ಉಷಾ, ಮಂಡ್ಯದ ಪೂರ್ವಿಕಾ 18–15, 15–12ರಿಂದ ವಿಜಯಪುರದ ಮೇಘನಾ ಎದುರು, ಶಿವಮೊಗ್ಗದ ನಿಹಾರಿಕಾ 15–3, 15–8ರಿಂದ ರಾಮನಗರದ ಹಂಶಿಕಾ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.