ADVERTISEMENT

ಬಾನು ಆಯ್ಕೆ ‌| ಹೈಕೋರ್ಟ್‌ ಆದೇಶ ಸ್ವಾಗತಾರ್ಹ: ದಲಿತ ಮಹಾ ಸಭಾ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 3:53 IST
Last Updated 17 ಸೆಪ್ಟೆಂಬರ್ 2025, 3:53 IST
ಮೈಸೂರಿನ ಪುರಭವನದ ಆವರಣದಲ್ಲಿ ನಗರ (ಜಿಲ್ಲಾ ) ಕಾಂಗ್ರೆಸ್ ಹಾಗೂ ದಲಿತ ಮಹಾಸಭಾ ಸದಸ್ಯರು ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಪಿಐಎಲ್‌ ವಜಾಗೊಂಡಿರುವುದನ್ನು ಸ್ವಾಗತಿಸಿ ಹರ್ಷಾಚರಣೆ ನಡೆಸಿದರು  ಪ್ರಜಾವಾಣಿ ಚಿತ್ರ
ಮೈಸೂರಿನ ಪುರಭವನದ ಆವರಣದಲ್ಲಿ ನಗರ (ಜಿಲ್ಲಾ ) ಕಾಂಗ್ರೆಸ್ ಹಾಗೂ ದಲಿತ ಮಹಾಸಭಾ ಸದಸ್ಯರು ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಪಿಐಎಲ್‌ ವಜಾಗೊಂಡಿರುವುದನ್ನು ಸ್ವಾಗತಿಸಿ ಹರ್ಷಾಚರಣೆ ನಡೆಸಿದರು  ಪ್ರಜಾವಾಣಿ ಚಿತ್ರ   

ಮೈಸೂರು: ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಪಿಐಎಲ್‌ ವಜಾಗೊಂಡಿರುವುದನ್ನು ಸ್ವಾಗತಿಸಿ ನಗರ (ಜಿಲ್ಲಾ ) ಕಾಂಗ್ರೆಸ್ ಹಾಗೂ ದಲಿತ ಮಹಾ ಸಭಾದ ಸದಸ್ಯರು ಪುರಭವನ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ಮಂಗಳವಾರ ಹರ್ಷಾಚರಣೆ ನಡೆಸಿದರು.

ಸಂಘಟನೆ ಅಧ್ಯಕ್ಷ ಎಸ್‌.ರಾಜೇಶ್‌ ಮಾತನಾಡಿ, ‘ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಿಸಾರ್ ಅಹಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜ್‌ ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಚಕಾರವೆತ್ತಿರಲಿಲ್ಲ. ಆದರೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾಗಿರುವ ಬಾನು ಮಸ್ತಾಕ್ ದಸರಾ ಉದ್ಘಾಟಿಸಲು ಸರ್ಕಾರ ಅಹ್ವಾನ ಮಾಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂದು ಪ್ರಯತ್ನಿಸಿದ್ದವು. ಹೈಕೋರ್ಟ್‌ ಆದೇಶವು ಅವರ ಪ್ರಯತ್ನಕ್ಕೆ ತಣ್ಣೀರೆರಚಿದೆ’ ಎಂದರು.

ಮುಖಂಡರಾದ ಶಿವಣ್ಣ, ಮರಿದೇವಯ್ಯ, ಸುನೀಲ್‌ ನಾರಾಯಣ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಕುರುಬರಹಳ್ಳಿ ಪ್ರಕಾಶ್‌, ಎಸ್‌.ಎ.ರಹೀಂ, ಅಮ್ರಾನ್‌ ಪಾಷಾ, ಮಹದೇವು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.