ADVERTISEMENT

ಬೆಂಗಳೂರು ನಗರ ವಿಭಾಗ ಸಮಗ್ರ ಪ್ರಶಸ್ತಿ

ದಸರಾ ಸಿ.ಎಂ. ಕಪ್‌ ಪ್ರತಿಭಾನ್ವೇಷಣಾ ಕ್ರೀಡಾಕೂಟ: ಪೃಥ್ವಿ, ಮೇಘಾ ಉತ್ತಮ ಅಥ್ಲೀಟ್ಸ್‌

ಆರ್.ಜಿತೇಂದ್ರ
Published 14 ಅಕ್ಟೋಬರ್ 2023, 21:02 IST
Last Updated 14 ಅಕ್ಟೋಬರ್ 2023, 21:02 IST
ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯ ವಿಜೇತ ಮೈಸೂರು ವನಿತೆಯರ ತಂಡ. ನಿಂತವರು (ಎಡದಿಂದ); ಬಬಿತಾ, ಹರ್ಷಿತಾ, ಹರಿಣಿ, ಬಿಂದುಶ್ರೀ, ಪ್ರಜ್ವಿನಿ ಶೆಟ್ಟಿ, ತಾಸ್ವಿ ಶೆಟ್ಟಿ, ಸಿ. ರವಿಪ್ರಕಾಶ್‌ ( ಕೋಚ್‌). ಕುಳಿತವರು: ಹಂಸಾ, ದಿವ್ಯ, ಹೊನ್ನುಶ್ರೀ.
ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌
ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯ ವಿಜೇತ ಮೈಸೂರು ವನಿತೆಯರ ತಂಡ. ನಿಂತವರು (ಎಡದಿಂದ); ಬಬಿತಾ, ಹರ್ಷಿತಾ, ಹರಿಣಿ, ಬಿಂದುಶ್ರೀ, ಪ್ರಜ್ವಿನಿ ಶೆಟ್ಟಿ, ತಾಸ್ವಿ ಶೆಟ್ಟಿ, ಸಿ. ರವಿಪ್ರಕಾಶ್‌ ( ಕೋಚ್‌). ಕುಳಿತವರು: ಹಂಸಾ, ದಿವ್ಯ, ಹೊನ್ನುಶ್ರೀ. ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌   

ಮೈಸೂರು: ಬೆಂಗಳೂರು ನಗರ ವಿಭಾಗವು ಶನಿವಾರ ಇಲ್ಲಿ ಮುಕ್ತಾಯಗೊಂಡ ದಸರಾ ಸಿ.ಎಂ. ಕಪ್‌ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‌ಷಿಪ್‌ ತನ್ನದಾಗಿಸಿಕೊಂಡಿತು.

ಬೆಂಗಳೂರು ನಗರದ ಕ್ರೀಡಾಪಟುಗಳು ಒಟ್ಟು 81 ಚಿನ್ನ, 74 ಬೆಳ್ಳಿ ಹಾಗೂ 50 ಕಂಚು ಸೇರಿದಂತೆ ಒಟ್ಟು 205 ಪದಕಗಳನ್ನು ಗೆದ್ದು ಪ್ರಾಬಲ್ಯ ಮೆರೆದರು. ಬೆಳಗಾವಿ ವಿಭಾಗವು 57 ಚಿನ್ನ, 56 ಬೆಳ್ಳಿ, 51 ಕಂಚು ಸೇರಿ 164 ಪದಕಗಳೊಂದಿಗೆ ರನ್ನರ್ ಅಪ್‌ ಆಯಿತು. ಆತಿಥೇಯ ಮೈಸೂರು ವಿಭಾಗವು 45 ಚಿನ್ನ, 52 ಬೆಳ್ಳಿ ಹಾಗೂ 53 ಕಂಚಿನೊಂದಿಗೆ 150 ಪದಕ ಪಡೆದು ಮೂರನೇ ಸ್ಥಾನಕ್ಕೆ ಸರಿಯಿತು.

ಅಥ್ಲೆಟಿಕ್ಸ್‌– ಮೈಸೂರು ಮುಂದು:
ಮೈಸೂರು ವಿಭಾಗದ ಅಥ್ಲೀಟ್‌ಗಳು ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಒಟ್ಟಾರೆ 11 ಚಿನ್ನ, 13 ಬೆಳ್ಳಿ ಹಾಗೂ 3 ಕಂಚಿನ ಪದಕದೊಂದಿಗೆ ಈ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗದ ಪೃಥ್ವಿ ಸೇರೆಗಾರ್ 948 ಅಂಕಗಳೊಂದಿಗೆ ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಳಗಾವಿಯ ಮೇಘಾ ಮುನವಳ್ಳಿ 930 ಅಂಕಗಳೊಂದಿಗೆ ಉತ್ತಮ ಅಥ್ಲೀಟ್ಸ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

ಸೈಕ್ಲಿಂಗ್‌ ಸ್ಪರ್ಧೆಯ ಮಹಿಳಾ ಮತ್ತು ಪುರುಷರ ವಿಭಾಗ ಎರಡರಲ್ಲೂ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು ಪಾರಮ್ಯ ಮೆರೆದರು.

ಮೂರನೇ ದಿನದ ಫಲಿತಾಂಶ:

ಪುರುಷರು:
ಸೈಕ್ಲಿಂಗ್‌: 80 ಕಿ.ಮೀ. ಮಾಸ್‌ ಸ್ಟಾರ್ಟ್‌ ರೇಸ್‌: ಬೀರಪ್ಪ ನವಲಿ (ವಿಜಯಪುರ)–1, ಸಂತೋಷ್‌ ಪೂಜಾರಿ (ವಿಜಯಪುರ)–2, ಮಲ್ಲೇಶ್‌ ಬಡಿಗೇರ (ಬಾಗಲಕೋಟೆ)–3. ಕಾಲ: 1 ಗಂಟೆ, 18ನಿ, 20 ಸೆ; ಜಿಮ್ನಾಸ್ಟಿಕ್ಸ್‌ ವಿಭಾಗ: ಏರೊಬಿಕ್ಸ್‌: ಮನೋಜ್‌ ದಾಸ್‌ (ಬೆಂ. ನಗರ)–1, ಓಜಸ್ವಿ ಕೌಶಿಕ್‌ (ಬೆಂ. ನಗರ)–2, ಹರ್ಷಿತ್‌ ಕುಮಾರ್ (ಮೈಸೂರು)–3; ಟ್ರಾಂಪೊಲಿನ್‌: ಉದಯ್‌ ನಾಯ್ಡು (ಬೆಂ.ನಗರ)–1, ಬಿ.ಎಲ್. ತ್ರಿಷೂಲ್‌ ಗೌಡ (ಬೆಂ.ನಗರ)–2, ಜೆ. ಚಿರಂತ್ (ಬೆಂ.ಗ್ರಾಮೀಣ)–3.

ಟೇಬಲ್ ಟೆನಿಸ್‌: ಸಿಂಗಲ್ಸ್‌: ಶ್ರೀನಿವಾಸ ಕಾರ್ತಿಕ್‌–1, ಯು.ಎನ್. ರಾಮಕುಮಾರ್‌–2; ಡಬಲ್ಸ್‌: ಬಿ.ಆರ್. ಗೌರವ್‌, ಆರ್ಣವ್‌ ನವೀನ್‌–1, ಯು.ಎನ್‌. ರಾಮ್‌ಕುಮಾರ್, ಎಸ್. ವಿಕ್ರಮಾದಿತ್ಯ–2; ಗುಂಪು ವಿಭಾಗ: ಮೈಸೂರು–1, ಬೆಂಗಳೂರು ನಗರ–2.

ಗುಂಪು ವಿಭಾಗದ ಸ್ಪರ್ಧೆಗಳು:
ಬಾಲ್‌ ಬ್ಯಾಡ್ಮಿಂಟನ್‌: ಮೈಸೂರು–1, ಬೆಂಗಳೂರು ನಗರ–2, ಬೆಂ.ಗ್ರಾಮೀಣ–3; ಫುಟ್‌ಬಾಲ್‌: ಕಲಬುರಗಿ–1, ಬೆಂ.ನಗರ–2, ಬೆಳಗಾವಿ–3; ಹ್ಯಾಂಡ್‌ಬಾಲ್‌: ಬೆಂ.ನಗರ–1, ಮೈಸೂರು–2, ಬೆಂ.ಗ್ರಾಮೀಣ–3; ಹಾಕಿ: ಬೆಂ.ನಗರ–1, ಮೈಸೂರು–2, ಬೆಂ.ಗ್ರಾಮೀಣ–3; ಕಬಡ್ಡಿ: ಮೈಸೂರು–1, ಬೆಳಗಾವಿ–2, ಬೆಂ.ಗ್ರಾಮೀಣ–3; ಕೊಕ್ಕೊ: ಬೆಂ. ನಗರ–1, ಬೆಂ. ಗ್ರಾಮೀಣ–2, ಮೈಸೂರು–3; ನೆಟ್‌ಬಾಲ್‌: ಬೆಂ.ಗ್ರಾಮೀಣ–1, ಬೆಂ.ನಗರ–2, ಬೆಳಗಾವಿ–3; ಥ್ರೋಬಾಲ್‌: ಬೆಂ.ನಗರ–1, ಮೈಸೂರು–2, ಬೆಂ.ಗ್ರಾಮೀಣ–3; ವಾಲಿಬಾಲ್‌: ಬೆಳಗಾವಿ–1, ಮೈಸೂರು–2, ಬೆಂ.ನಗರ–3.

ಮಹಿಳೆಯರು:
ಸೈಕ್ಲಿಂಗ್‌: 50 ಕಿ.ಮೀ ರೇಸ್‌: ದಾನವ್ವ ಗುರವ (ಬಾಗಲಕೋಟೆ)–1, ರೇಣುಕಾ ಕಾಖಂಡಕಿ  (ಬಾಗಲಕೋಟೆ)–2, ಪುಷ್ಪಾ ಲಮಾಣಿ–3; ಜಿಮ್ನಾಸ್ಟಿಕ್ಸ್‌: ಏರೋಬಿಕ್ಸ್‌: ಎಸ್. ದಿಯಾ (ಬೆಂ.ನಗರ)–1, ಉನ್ನತಿ (ಬೆಂ.ನಗರ)–2, ಯುಕ್ತಿ (ಬೆಂ.ಗ್ರಾ)–3; ಟ್ರಾಂಪೊಲಿನ್‌: ಎಚ್‌.ಎಂ. ಶಿಲ್ಪಶ್ರೀ (ಬೆಂ. ಗ್ರಾ) –1, ಎಂ.ಪಿ. ಸನ್ನಿಧಿ (ಬೆಂ.ನಗರ)–2, ಕುಶಾ ಅಶೋಕ್ (ಬೆಂ.ನಗರ); ಟೇಬಲ್ ಟೆನಿಸ್‌ ಸಿಂಗಲ್ಸ್‌; ಹಿಮಾಂಶಿ ಚೌಧರಿ–1, ಆಯುಷಿ ಗೋಡ್ಸೆ–2. ಡಬಲ್ಸ್‌: ತನಿಷ್ಕ ಕಾಲಭೈರವ, ಆಯುಷಿ ಗೋಡ್ಸೆ–1, ಪ್ರೇಕ್ಷಾ ನಹಾಲ ಫಾತಿಮಾ–2.

ಗುಂಪು ವಿಭಾಗದ ಸ್ಪರ್ಧೆಗಳು:
ಬಾಲ್‌ ಬ್ಯಾಡ್ಮಿಂಟನ್‌: ಮೈಸೂರು–1, ಬೆಂ. ಗ್ರಾಮೀಣ–2, ಬೆಂ. ನಗರ–3; ಬ್ಯಾಸ್ಕೆಟ್‌ಬಾಲ್‌: ಮೈಸೂರು–1, ಬೆಂ. ನಗರ–2, ಬೆಳಗಾವಿ–3; ಹ್ಯಾಂಡ್‌ಬಾಲ್‌: ಮೈಸೂರು–1, ಬೆಂ.ನಗರ–2, ಬೆಂ.ಗ್ರಾಮೀಣ–3; ಹಾಕಿ: ಮೈಸೂರು–1, ಬೆಂ.ನಗರ–2, ಕಲಬುರಗಿ–3; ಕಬಡ್ಡಿ: ಬೆಂ.ಗ್ರಾಮೀಣ–1, ಬೆಳಗಾವಿ–2, ಮೈಸೂರು–3; ಕೊಕ್ಕೊ: ಮೈಸೂರು–1, ಬೆಂ.ನಗರ–2, ಬೆಳಗಾವಿ–3; ನೆಟ್‌ಬಾಲ್‌: ಬೆಂ.ನಗರ–1, ಬೆಂ.ಗ್ರಾಮೀಣ–2, ಮೈಸೂರು–3; ಥ್ರೋಬಾಲ್‌: ಮೈಸೂರು–1, ಬೆಂ.ನಗರ–2, ಬೆಂ.ಗ್ರಾಮೀಣ–3; ವಾಲಿಬಾಲ್‌: ಮೈಸೂರು–1, ಬೆಳಗಾವಿ–2, ಬೆಂ.ನಗರ–3;

ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದ ಬೆಂಗಳೂರು ನಗರ ಹಾಗೂ ಕಲಬುರ್ಗಿ ತಂಡಗಳ ಆಟಗಾರರುಪ್ರಜಾವಾಣಿ ಚಿತ್ರ: ಹಂಪಾ ನಾಗರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.