ADVERTISEMENT

ದಶಪಥದಲ್ಲಿ ‘ದುಬಾರಿ ಟೋಲ್ ದರ': ಮೈಸೂರಿನಲ್ಲಿ ವಿಶ್ವನಾಥ್‌ ಹೋರಾಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 8:52 IST
Last Updated 17 ಮಾರ್ಚ್ 2023, 8:52 IST
ಮೈಸೂರಿನಲ್ಲಿ  ಶುಕ್ರವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಮೈಸೂರಿನಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಮೈಸೂರು: ‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಜನಸ್ನೇಹಿ ಟೋಲ್ ದರ ಸಂಗ್ರಹಿಸುವಂತೆ’ ಆಗ್ರಹಿಸಿ ಇಲ್ಲಿನ ದಶಪಥ ಪ್ರವೇಶದ ಬೆಂಗಳೂರು ರಸ್ತೆಯ ಮಣಿಪಾಲ ವೃತ್ತದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

' ದುಬಾರಿ ಟೋಲ್ ವಿರುದ್ಧ ಶಾಂತಿಯುತ ಪ್ರತಿಭಟನೆ' ಯಲ್ಲಿ ವಿವಿಧ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿದ್ದು, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಚಳವಳಿ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದೇವರಾಜ ಅರಸು ಪ್ರತಿಮೆ ನಿರ್ಮಾಣ ಸಮಿತಿ , ಕನ್ನಡ ವೇದಿಕೆ ಪ್ರಮುಖರು, ಇದ್ದರು.

'ಕಿ.ಮೀ.ಗೆ ₹ 1 ಸಾಕು', ಟೋಲ್ ದರ ₹1 ಕ್ಕೆ ನಿಗದಿಯಾಗಬೇಕು', 'ದುಬಾರಿ ಬೆಲೆಗೆ ಜನ ಕುಸಿದಿದ್ದಾರೆ ಟೋಲ್ ಶುಲ್ಕದ ಭಾರಕ್ಕೆ ನರಳುತ್ತಿದ್ದಾರೆ', ಎಂಬಿತ್ಯಾದಿ ಘೋಷಣೆಗಳ ಫಲಕ ಪ್ರದರ್ಶಿಸಿದರು.

ADVERTISEMENT

ಭಾರಿ ಪೊಲೀಸ್‌ ಬಂದೋ ಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.