ಬೆಟ್ಟದಪುರ: ಸಚಿವ ಕೆ.ವೆಂಕಟೇಶ್ ಅವರನ್ನು ಸರ್ವ ಸದಸ್ಯರ ನಿಯೋಗ ಭೇಟಿ ಮಾಡಿ ಸಹಕಾರ ಸಂಘದ ಅಭಿವೃದ್ಧಿಗೆ ಹಾಗೂ ಅನುದಾನ ಮಂಜೂರು ಮಾಡಿಸಲು ಮನವಿ ಮಾಡಲಾಗುವುದು. ಸಂಘದಿಂದ ಸಾಲ ಪಡೆದ ಸದಸ್ಯರು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿ ಪ್ರಗತಿಗೆ ಶ್ರಮಿಸಬೇಕು ಎಂದು ಭುವನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಬಿ.ಎಸ್ ಸೋಮೇಗೌಡ ತಿಳಿಸಿದರು.
ಭುವನಹಳ್ಳಿ ಪಿಎಸಿಸಿಎಸ್ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನಿಗದಿತ ಸಮಯಕ್ಕೆ ತಲುಪಿಸಿ, ಷೇರುದಾರ ಸದಸ್ಯರ ಹಿತ ಕಾಪಾಡಲಾಗುತ್ತಿದೆ ಎಂದರು.
ಸಂಘದ ಸಿಇಒ ಬಿ.ಪಿ ಸತೀಶ್ ವಾರ್ಷಿಕ ವರದಿ ಮಂಡಿಸಿ ಮಾತನಾಡಿ 2024-25 ನೇ ಸಾಲಿನಲ್ಲಿ ಸಂಘವು ₹ 9.72 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ ಸುಸ್ತಿ ಸದಸ್ಯರಿಗೆ ಮಾಹಿತಿ ನೀಡಿ ಶೀಘ್ರ ಹಣ ಮರುಪಾವತಿಸುವಂತೆ ಸೂಚಿ ಸಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಆನಂದ್, ನಿರ್ದೇಶಕರಾದ, ಬಿ.ಎಸ್. ದಿನೇಶ್, ಬಿ.ಆರ್ ಲೋಹಿತ, ಬಿ.ಆರ್ ನವೀನ, ಬಿ.ಟಿ ಹಂಸರಾಜ್, ಬಿ.ಎಸ್ ಸುಮಿತ್ರ, ಹೇಮಾವತಿ, ಬಿ.ಎಚ್ ಸೋಮಶೇಖರ, ಶಂಕರ, ಬೋರಪ್ಪ, ಕೆ.ಸಿ ಮಹೇಶ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರತಿನಿಧಿ ಟಿ.ಯತೀಶ್, ಸಿಬ್ಬಂದಿ ಬಿ.ಪಿ ರಾಜಶೇಖರ್, ಬಿ.ಸಿ ಸಂತೋಷ್ ಕುಮಾರ್ , ಭುವನಹಳ್ಳಿ ,ಕೊಣಸೂರು, ಜೋಗನಹಳ್ಳಿ ,ಸಾಲುಕೊಪ್ಪಲು ಗ್ರಾಮಗಳ ಸಂಘದ ಸದಸ್ಯರು, ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.