ADVERTISEMENT

ಬಿಜೆಪಿ ಜತೆ ಅಧಿಕಾರ ಹಂಚಿಕೆ ಸದ್ಯಕ್ಕಿಲ್ಲ: ಎಚ್.ಡಿ.ರೇವಣ್ಣ

ಸರ್ಕಾರಿ ಉಳಿಸಿಕೊಳ್ಳಲು ಚಾಮುಂಡಿಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:19 IST
Last Updated 12 ಜುಲೈ 2019, 19:19 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಮೈಸೂರು: ‘ಬಿಜೆಪಿ ಮುಖಂಡರ ಜತೆ ಸಚಿವ ಸಾ.ರಾ.ಮಹೇಶ್ ಮಾತುಕತೆ ನಡೆಸಿರುವ ವಿಚಾರದ ಕುರಿತು ನನಗೇನೂ ಗೊತ್ತಿಲ್ಲ. ಸದ್ಯಕ್ಕೆ, ಬಿಜೆಪಿ ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳುವಂತಹ ಬೆಳವಣಿಗೆ ನಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಆಷಾಢ ಶುಕ್ರವಾರದ ನಿಮಿತ್ತ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೇವಿಯ ವಿಗ್ರಹದ ಮುಂದೆ ಕುಳಿತು 20 ನಿಮಿಷ ಪೂಜಾ ಕೈಂಕರ್ಯ ನಡೆಸಿದ ಅವರು, ‘ಚಾಮುಂಡೇಶ್ವರಿ ತಾಯಿಗೆ ಕುಮಾರಸ್ವಾಮಿ ಹೆಸರಲ್ಲಿ ಸಂಕಲ್ಪ ಮಾಡಿದ್ದೇನೆ. ದೇವರ ಆಶೀರ್ವಾದ ಇರುವವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಅವರಿಗೆ ಚಾಮುಂಡೇಶ್ವರಿಯ ಅನುಗ್ರಹ ಇದೆ. ಇನ್ನು ಮುಂದೆ ಎಲ್ಲವೂ ದೇವರಮಯ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.