ADVERTISEMENT

ಎರಡು ಹುಲಿ ಮರಿಗಳ ಮೃತದೇಹಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:14 IST
Last Updated 26 ಜನವರಿ 2022, 3:14 IST

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಎರಡು ಹುಲಿ ಮರಿಗಳ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.

ಹುಲಿ ಗಣತಿ ವೇಳೆ ಪತ್ತೆಯಾದ 8ರಿಂದ 9 ವರ್ಷ ವಯಸ್ಸಿನ ಈ ಎರಡೂ ಹುಲಿ ಮರಿಗಳು ಮತ್ತೊಂದು ಹುಲಿಯ ದಾಳಿಯಿಂದ ಮೃತಪಟ್ಟಿವೆ. ಇದಕ್ಕೆ ಪೂರಕವಾಗಿ ದೇಹದ ಮೇಲೆ ಹುಲಿ ಪರಚಿದ ಗಾಯಗಳು ಕಂಡು ಬಂದಿವೆ.

ಒಂದು ಹುಲಿ ಮರಿ ಗಂಡಾಗಿದ್ದರೆ ಮತ್ತೊಂದು ಹುಲಿಯ ದೇಹದ ಭಾಗಗಳನ್ನು ಪ್ರಾಣಿಗಳು ತಿಂದಿರುವುದರಿಂದ ಲಿಂಗ ಪತ್ತೆಯಾಗಿಲ್ಲ. ಡಿ ಎನ್ ಎ ಪರೀಕ್ಷೆ ಯ ನಂತರ ಗೊತ್ತಾಗಲಿದೆ ಎಂದು ಎಸಿಎಫ್ ಮಹದೇವಯ್ಯ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.