ADVERTISEMENT

ಬಾಡಿಗೆಗೆ ‘ಬುಕ್‌’ ಮಾಡಿದ ಕಾರನ್ನೇ ಕಳವು ಮಾಡಿದ ಭೂಪ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:55 IST
Last Updated 25 ಮೇ 2019, 19:55 IST

ಮೈಸೂರು: ಬಾಡಿಗೆಗೆಂದು ಬೇರೆಯವರ ಮೊಬೈಲ್‌ನಿಂದ ಕಾರೊಂದನ್ನು ‘ಬುಕ್‌’ ಮಾಡಿದ ವ್ಯಕ್ತಿಯೊಬ್ಬ ಚಾಲಕ ಕೆಳಗೆ ಇಳಿದಾಗ ಕಾರಿನೊಂದಿಗೆ ಪರಾರಿಯಾಗಿದ್ದಾನೆ.

ಇಲ್ಲಿನ ರೈಲು ನಿಲ್ದಾಣದಲ್ಲಿ ಸಾರ್ವಜನಿಕರೊಬ್ಬರ ಬಳಿ ‘ನನ್ನ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಇಲ್ಲ. ಇನ್ಪೊಸಿಸ್‌ಗೆ ಹೋಗಬೇಕಿದೆ. ನನಗೊಂದು ಕಾರನ್ನು ‘ಜಿಗ್ನೊ’ ಕಂಪನಿ ಆ್ಯಪ್‌ನಿಂದ ಬಾಡಿಗೆಗೆ ‘ಬುಕ್‌’ ಮಾಡಿಕೊಡಿ’ ಎಂದು ಕೇಳಿದ್ದಾನೆ. ಇದಕ್ಕೆ ಸ್ಪಂದಿಸಿದ ವ್ಯಕ್ತಿ ‘ಬುಕ್‌’ ಮಾಡಿದ್ದಾರೆ. ತಕ್ಷಣವೇ ಕಾರು ಸಹ ಬಂದಿದೆ. ‘ಬುಕ್’ ಮಾಡಿಕೊಟ್ಟವರಿಗೆ ‘ಥ್ಯಾಂಕ್ಸ್‌’ ಹೇಳಿದ ವ್ಯಕ್ತಿ ಕಾರನ್ನೇರಿ ಹೊರಟಿದ್ದಾನೆ.

ಇನ್ಪೊಸಿಸ್‌ನ ಮುಂದೆ ನಿರ್ಜನ ಪ್ರದೇಶದತ್ತ ಹೋಗಬೇಕಿದೆ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಚಾಲಕ ರಘುಸ್ವಾಮಿ ಹೊರಟಿದ್ದಾನೆ. ದಾರಿಯಲ್ಲಿ ಕಲ್ಲು ಮಣ್ಣಿನ ರಸ್ತೆಯಲ್ಲಿ ಕಲ್ಲೊಂದು ಬಿದ್ದಿದ್ದು, ಅದನ್ನು ಪಕ್ಕಕ್ಕೆ ಸರಿಸಲು ಚಾಲಕ ಕೆಳಗೆ ಇಳಿದಿದ್ದಾನೆ. ಈ ವೇಳೆ ಕಾರಿನಲ್ಲೇ ಕೀಯನ್ನು ಬಿಟ್ಟಿದ್ದನ್ನು ಗಮನಿಸಿದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.