ADVERTISEMENT

’ವಿವೇಚನೆ‘, ’ಶೋಧನೆಯ ಹಾದಿಯಲ್ಲಿ‘ ಕೃತಿಗಳ ಬಿಡುಗಡೆ 27ರಂದು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 9:13 IST
Last Updated 24 ಸೆಪ್ಟೆಂಬರ್ 2019, 9:13 IST

ಮೈಸೂರು: ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕಿ ಡಾ.ಲಲಿತಾ ಕೆ.ಪಿ ಅವರ ’ವಿವೇಚನೆ‘ ಮತ್ತು ’ಶೋಧನೆಯ ಹಾದಿಯಲ್ಲಿ‘ ಕೃತಿಗಳು ಸೆ.27ರಂದು ಬಿಡುಗಡೆಯಾಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ ತಿಳಿಸಿದರು.

ಜನಪದ, ಚರಿತ್ರೆ ಹಾಗೂ ಭಾಷ ವಿಜ್ಞಾನಕ್ಕೆ ಆಕರ ಗಂಥಗಳಾಗಿದ್ದು ಕೃತಿಗಳನ್ನು ರಾಣಿಬಹದ್ದೂರ್‌ ಸಭಾಂಗಣದಲ್ಲಿ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಬಿಡುಗಡೆ ಮಾಡುವರು. ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಪ್ರೊ.ಸಿ.ನಾಗಣ್ಣ ಕೃತಿಗಳ ಕುರಿತು ಮಾತನಾಡಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT