ADVERTISEMENT

ಬಸ್‌ನಲ್ಲಿ ಬೆಂಕಿ; ತಪ್ಪಿ ಅನಾಹುತ

ವಿದ್ಯುನ್ಮಾನ ಮತಯಂತ್ರ ಸಾಗಣೆ ವೇಳೆ ಅವಘಢ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 5:29 IST
Last Updated 19 ಏಪ್ರಿಲ್ 2019, 5:29 IST
   

ಮೈಸೂರು: ಮತದಾನ ಮುಗಿದ ಬಳಿಕ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಾಗಿಸುತ್ತಿದ್ದ ಬಸ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಚಾಲಕಸಮುಯಪ್ರಜ್ಞೆ ಮೆರೆದು ಕೇಬಲ್ ವೈಯರ್ ಕತ್ತರಿಸಿ ಬೆಂಕಿ ಹರಡುವುದನ್ನು ತಡೆಗಟ್ಟಿದ್ದಾರೆ.

ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಬಸ್‌ನಲ್ಲಿ ತರುತ್ತಿದ್ದ ವೇಳೆ ಗೌರಿಶಂಕರನಗರದ ಗವಿಮಠ ರಸ್ತೆಯಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡಿವೆ. ಚಾಲಕ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ತಕ್ಷಣ ಕೇಬಲ್ ವೈಯರ್ ಕತ್ತರಿಸಿದ್ದಾರೆ. ಇದರಿಂದ ಬೆಂಕಿ ಹರಡಿಲ್ಲ. ನಂತರ, ಸ್ಥಳಕ್ಕೆ ಬಂದ ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಬೇರೊಂದು ಬಸ್‌ ತರಿಸಿ ಅದರಲ್ಲಿ ಮತಯಂತ್ರಗಳನ್ನು ಕಳುಹಿಸಿದರು.

ಸಂಜೆ 7.10ರವರೆಗೂ ಮತದಾನ

ADVERTISEMENT

ಇಲ್ಲಿನ ಲಷ್ಕರ್ ಮೊಹಲ್ಲಾದ 216ನೇ ಮತಗಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಮತದಾನ ಒಂದು ಗಂಟೆ ತಡವಾಗಿ ಆರಂಭವಾಯಿತು. ಇದರಿಂದ ಮತದಾನದ ಮುಕ್ತಾಯದ ಅವಧಿಯನ್ನು 1 ಗಂಟೆ ಕಾಲ ವಿಸ್ತರಿಸಲಾಯಿತು. ಸಂಜೆ 7.10ರವರೆಗೂ ಮತದಾನಕ್ಕೆ ಅವಕಾಶ ನೀಡಲಾಯಿತಾದರೂ ಯಾರೊಬ್ಬರೂ ಹೆಚ್ಚುವರಿ ಅವಧಿಯಲ್ಲಿ ಮತದಾನ ಮಾಡಲಿಲ್ಲ.

5 ಗಂಟೆಯ ನಂತರ ಬಂದ 100 ಮಂದಿ

ಮಂಜುನಾಥನಗರದ ಮತಗಟ್ಟೆಯೊಂದರಲ್ಲಿ ಸಂಜೆ 5 ಗಂಟೆ ವೇಳೆಗೆ ಸುಮಾರು 100 ಮಂದಿ ಮತದಾರರು ಬಂದರು. ಇದರಿಂದ ಕೆಲಕಾಲ ಗಲಿಬಿಲಿ ಉಂಟಾಯಿತು. ಆದರೆ, ಇನ್ನೂ ಒಂದು ಗಂಟೆ ಅವಕಾಶ ಇದ್ದುದ್ದರಿಂದ ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ನಕಲಿ ಮತ ಆರೋಪ; ಗಲಾಟೆ

ತಿಲಕ್‌ನಗರದ ಸೇಂಟ್ ಮೇರಿಸ್ ಶಾಲೆಯ ಮತಗಟ್ಟೆಯೊಂದರ ಸಮೀಪ ಕೆಲವರು ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.