ADVERTISEMENT

ಬಸ್ ನಿಲ್ದಾಣ ವಿವಾದ: ತಪ್ಪಾಗಿದ್ರೆ, ಸಂಬಳದಿಂದ ಹಣ‌ ಕೊಡಲು ಸಿದ್ಧ- ರಾಮದಾಸ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:04 IST
Last Updated 17 ನವೆಂಬರ್ 2022, 6:04 IST
   

ಮೈಸೂರು: ಬಸ್ ನಿಲ್ದಾಣದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿವರವಾಗಿ ತಿಳಿಸಿದ್ದೇನೆ. ಈ ಕುರಿತಂತೆ ತಜ್ಞರ‌ ಸಮಿತಿ ಕಳುಹಿಸಲು ಮನವಿ‌ ಮಾಡಿದ್ದು, ಯಾವುದಾದರೂ ವಿವಾದ ಕಂಡುಬಂದಲ್ಲಿ ನಾನು ಕ್ಷಮೆ ಕೋರುತ್ತೇನೆ. ತಪ್ಪಾಗಿದ್ದರೆ ನಾನು ಆ ಹಣವನ್ನು ‌ಸಂಬಳದಿಂದ ಭರಿಸಲು ಸಿದ್ಧ ಎಂದು ಶಾಸಕ ರಾಮದಾಸ್ ತಿಳಿಸಿದರು.

ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ‌ಜಾಲತಾಣಗಳಲ್ಲಿ ತಪ್ಪು ‌ಮಾಹಿತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೂ ಪತ್ರ ಬರೆದು ವಿವರವಾಗಿ ತಿಳಿಸಿದ್ದೇನೆ. ಸಾಂಸ್ಕೃತಿಕ ನಗರಿಯಲ್ಲಿ ಅರಮನೆ ಮಾದರಿಯಲ್ಲಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ನಿಲ್ದಾಣದ ವಿನ್ಯಾಸ ‌ಮಾಡಲಾಗಿತ್ತು. ವಿವಾದ ಉಂಟುಮಾಡುವ ಉದ್ದೇಶವಿರಲಿಲ್ಲ ಎಂದು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಮಸ್ಯೆ ಸೃಷ್ಟಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಬಸ್ ನಿಲ್ದಾಣ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರೆ, ಕೆಲಸ ನಿಲ್ಲಿಸಲಾಗುವುದು. ಕಾನೂನಿನ ಪ್ರಕಾರ, ನಿಲ್ದಾಣ ನಿರ್ಮಾಣಗೊಂಡಿದ್ದು, ಕೆಆರ್ ಐಡಿಎಲ್ ಕಾಮಗಾರಿ ನಿರ್ವಹಿಸಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.