ಕೊಳ್ಳೇಗಾಲ: ‘ಕೆಲವು ಬಿಎಸ್ಪಿ ಕಾರ್ಯಕರ್ತರು ಶಾಸಕ ಎನ್.ಮಹೇಶ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನಗೂ ಜಾತಿ ನಿಂದನೆ ಮಾಡಿದ್ದಾರೆ’ ಎಂದು ಮಾಂಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಬಟ್ಟೆ ಖರೀದಿಸಲು ಸ್ನೇಹಿತರೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಬಿಎಸ್ಪಿ ಪದಾಧಿಕಾರಿಗಳಾದ ಇನಾಯತ್ ಬೇಗ್, ಚೈನಾರಾಮ್ ಕಾಪ್ಡಿ, ರಂಗಸ್ವಾಮಿ, ಹನುಮಂತು ಅವರು ರಾಘವೇಂದ್ರ ಜುವೆಲ್ಲರಿ ಬಳಿ ನಮ್ಮನ್ನು ಅಡ್ಡಗಟ್ಟಿ ನಿಮ್ಮಣ್ಣನಿಗೆ ಸರಿಯಾಗಿ ಮಂಗಳಾರತಿ ಎತ್ತಿದ್ದೇವೆ’ ಎಂದು ಹೀಯಾಳಿಸಿದರು.
‘ಯಾರ ಬಗ್ಗೆ ಮಾತನಾಡುತ್ತೀದ್ದೀರಿ ಎಂದು ಕೇಳಿದಾಗ ಶಾಸಕ ಎನ್.ಮಹೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚೈನಾರಾಮ್ ಕಾಪ್ಡಿ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎದೆಗೆ, ಹೊಟ್ಟೆಗೆ, ಕುತ್ತಿಗೆಗೆ ಬಲವಾಗಿ ಗುದ್ದಿ ಗಾಯಗೊಳಿಸಿದರು. ನಾನು ಅಲ್ಲಿಂದ ತಪ್ಪಿಸಿಕೊಂಡೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.