ADVERTISEMENT

ಮೈಸೂರು: ‘ಚಾಮಯ್ಯ ಮೇಷ್ಟ್ರು–ಅಶ್ವತ್ಥ್’ ಸ್ಮರಣೆ

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾ ಘಟಕದಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:11 IST
Last Updated 16 ಜುಲೈ 2025, 4:11 IST
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಆಯೋಜಿಸಿದ್ದ ‘ಚಾಮಯ್ಯ ಮೇಷ್ಟ್ರು - ಕೆ.ಎಸ್. ಅಶ್ವತ್ಥ್‌‘ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಗಾಯಕರು ಗೀತನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಆಯೋಜಿಸಿದ್ದ ‘ಚಾಮಯ್ಯ ಮೇಷ್ಟ್ರು - ಕೆ.ಎಸ್. ಅಶ್ವತ್ಥ್‌‘ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಗಾಯಕರು ಗೀತನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ ವತಿಯಿಂದ ಮಂಗಳವಾರ ಇಲ್ಲಿನ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ‘ಚಾಮಯ್ಯ ಮೇಷ್ಟ್ರು- ಕೆ.ಎಸ್. ಅಶ್ವತ್ಥ್‌ ಜನ್ಮ ಶತಾಬ್ದಿ’ ಕಾರ್ಯಕ್ರಮ ನಡೆಯಿತು. ಆ ಮೇರು ನಟ ಕನ್ನಡ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಅಶ್ವತ್ಥ್‌ ಅವರ ಪುತ್ರ ಚಲನಚಿತ್ರ ನಟ ಶಂಕರ್ ಅಶ್ವತ್ಥ್‌ ಅವರ ನಿರೂಪಣೆಯಲ್ಲಿ ಮೈಸೂರಿನ ಗಾಯಕರು ಗೀತನಮನ ಸಲ್ಲಿಸಿದರು. ಅಶ್ವತ್ಥ್‌ ಅವರಿಗೆ ಇಷ್ಟವಾದ 33 ಹಾಡುಗಳ ಹಿನ್ನೆಲೆಯನ್ನು ಶಂಕರ್ ನಿರೂಪಿಸಿದರು. ಹಳೆಯ ಫೋಟೊ ಮತ್ತು ವಿಡಿಯೊಗಳನ್ನು ಪ್ರದರ್ಶಿಸಲಾಯಿತು.

ಎ.ಡಿ. ಶ್ರೀನಿವಾಸ್, ಕೃಷ್ಣಮೂರ್ತಿ, ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು, ಶಾಹಿದ್, ಜಯರಾಮ್, ಡೇವಿಡ್, ಎನ್‌. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ, ಶ್ರೀಕಾಂತರಾವ್, ಶ್ರೀಧರ್, ರವಿರಾಜ್ ಹಾಸು, ಡಾ.ಪೂರ್ಣಿಮಾ, ಶ್ರೀಲತಾ, ಸಿ.ಎಸ್‌. ವಾಣಿ, ವೇದಶ್ರೀ, ಗೀತಲಕ್ಷ್ಮೀ ಕಿಣಿ, ಅಬ್ದುಲ್ ಖಯ್ಯುಮ್, ನಾಗೇಂದ್ರ, ರಮೇಶ್, ಅಮೃತೇಶ್, ಶ್ರೀಕಂಠ ರಾವ್‌, ಕೃಷ್ಣಮೂರ್ತಿ, ಶ್ರೀಧರ್‌, ಎಚ್‌.ವಿ. ನಾಗೇಂದ್ರ ಹಾಡಿ ರಂಜಿಸಿದರು.

ಶಂಕರ್‌ ಅಶ್ವತ್ಥ್‌ ಅವರು ತಂದೆ ಚಿತ್ರರಂಗಕ್ಕೆ ಪ್ರವೇಶಿಸಿದ ದಿನಗಳಿಂದ ಹಿಡಿದು ಜೀವಿತದ ಕೊನೆಯವರೆಗೆ ನಡೆದ ಘಟನೆಗಳು, ನಡೆದುಕೊಂಡ ರೀತಿ, ಟಾಂಗಾ, ಬಸ್‌, ರೈಲಿನಲ್ಲಿಯೇ ಓಡಾಡುತ್ತಿದ್ದುದು ಸೇರಿದಂತೆ ಹಲವು ಸ್ವಾರಸ್ಯಕರ ಪ್ರಸಂಗಗಳನ್ನು ತಿಳಿಸಿದರು. ಇದು ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ರಂಗಕರ್ಮಿ ರಾಜಶೇಖರ ಕದಂಬ, ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ವಾಜಪೇಯಿ, ಮಂಡ್ಯ ಸತ್ಯ, ಅಲಯನ್ಸ್‌ ಸಹಾಯಕ ರಾಜ್ಯಪಾಲ ಸಂತೋಷ್‌ ಕುಮಾರ್‌, ರಂಗನಾಥ್‌  ಮೈಸೂರು, ವಿಜಯವಿಠ್ಠಲ ಕಾಲೇಜಿನ ಪ್ರಾಂಶುಪಾಲ ಎಚ್‌. ಸತ್ಯಪ್ರಸಾದ್‌ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ಎನ್‌. ಬೆಟ್ಟೇಗೌಡ,  ಸುಧಾ ಶಂಕರ್‌ ಅಶ್ವತ್ಥ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.