ADVERTISEMENT

ಮೈಸೂರು: ಬಿಸಿ ನೀರು ಬಿದ್ದು 2 ವರ್ಷದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:12 IST
Last Updated 14 ಡಿಸೆಂಬರ್ 2021, 4:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಇಲ್ಲಿನ ಜಯಪುರ ಹೋಬಳಿಯ ದಾಸನಕೊಪ್ಪಲು ನಿವಾಸಿ ರಾಮು ಅವರ 2 ವರ್ಷದ ಹೆಣ್ಣು ಮಗು ಆದ್ಯಾ ಬಿಸಿನೀರನ್ನು ಮೈಮೇಲೆ ಚೆಲ್ಲಿಕೊಂಡು ಭಾನುವಾರ ಸಂಜೆ ಮೃತಪಟ್ಟಿತು.

ಬೆಳಿಗ್ಗೆ ತಾಯಿಯು ಬಿಸಿನೀರಿನ ಪಾತ್ರೆಯನ್ನು ಸ್ನಾನದ ಮನೆಯಲ್ಲಿರಿಸಿ, ತಣ್ಣೀರು ತರಲು ಹೊರಗಡೆ ಹೋಗಿದ್ದಾಗ ಮನೆಯ ಹಾಲ್‌ನಲ್ಲಿದ್ದ ಮಗು ಅಲ್ಲಿಗೆ ಹೋಗಿ ಪಾತ್ರೆಯಲ್ಲಿದ್ದ ನೀರನ್ನು ಚೆಲ್ಲಿಕೊಂಡಿತ್ತು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT