ಜಯಪುರ: ಜಯಪುರ ಹೋಬಳಿಯ ಡಿ.ಸಾಲುಂಡಿ ಗ್ರಾಮದ ಸ್ಯಾಂಡಲ್ ರೋಸ್ ಕಾನ್ವೆಂಟ್‌ನಲ್ಲಿ ರಂಗ ಜಗಲಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಮಣ್ಣಿನ ಕಲಾಕೃತಿಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಮಣ್ಣಿನ ಮಾಡೆಲಿಂಗ್, ಮಣ್ಣನ್ನು ಬಳಸಿ ಹೊಸ ಆಕೃತಿ ರಚಿಸುವ ಕಲೆಯ ಬಗ್ಗೆ ಡಿ.ಎಸ್ ಶಿವಶಂಕರ್ ವಿಧ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಮುಖ್ಯಶಿಕ್ಷಕ ಮದನ್ ಕುಮಾರ್, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಜಿಬಿಎಸ್ ಸಿದ್ದೇಗೌಡ, ಸಂಪನ್ಮೂಲ ವ್ಯಕ್ತಿ ಡಿ.ಎಸ್ ಶಿವಶಂಕರ, ಕಾರ್ಯದರ್ಶಿ ಶೋಭಾ ಶಿವರಾಜು, ರಂಗಜಗಲಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ದಯಾನಂದ ಕಟ್ಟೆ, ಮುಖಂಡರಾದ ರಾಹುಲ್ ಕುಂಬರಹಳ್ಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.