ADVERTISEMENT

ನಂಜನಗೂಡು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಪೈಪೋಟಿ

ನಂಜನಗೂಡು ನಗರಸಭೆ ಮೀಸಲಾತಿ ಪ್ರಕಟ: ಬಿಜೆಪಿಯಲ್ಲಿ ಲಾಬಿ ಶುರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:12 IST
Last Updated 10 ಅಕ್ಟೋಬರ್ 2020, 2:12 IST
ನಂಜನಗೂಡು ನಗರಸಭೆ ಕಾರ್ಯಾಲಯ
ನಂಜನಗೂಡು ನಗರಸಭೆ ಕಾರ್ಯಾಲಯ    

ನಂಜನಗೂಡು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ನಂಜನಗೂಡು ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ನಿಗಧಿಯಾಗಿದೆ.

31 ಸ್ಥಾನದ ನಗರಸಭೆಯಲ್ಲಿ ಬಿ.ಜೆ.ಪಿ. 15, ಕಾಂಗ್ರೆಸ್ 10, ಜೆಡಿಎಸ್ 3 ಹಾಗೂ 3 ಮಂದಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ನಗರಸಭೆ ಅಧಿಕಾರ ಹಿಡಿಯಲು 16 ಸ್ಥಾನಗಳ ಅವಶ್ಯಕತೆಯಿದ್ದು, ಬಿಜೆಪಿ 15 ಸ್ಥಾನದ ಜೊತೆಗೆ ಶಾಸಕ ಹಾಗೂ ಸಂಸದರಿಗೆ ಮತದಾನದ ಅವಕಾಶವಿರುವುದರಿಂದ 17 ಮತದೊಂದಿಗೆ ಬಿಜೆಪಿ ನಗರಸಭೆಯ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಅಥವಾ ಪುರುಷರು ಸ್ಪರ್ಧಿಸಲು ಅವಕಾಶ ಇರುವುದರಿಂದ ಬಿಜೆಪಿ ಸದಸ್ಯರ ನಡುವೆ ಪೈಪೋಟಿ ನಡೆಯಲಿದೆ. 24ನೇ ವಾರ್ಡ್‌ನ ಕ್ರಷರ್ ಮಹದೇವಸ್ವಾಮಿ, 7ನೇ ವಾರ್ಡ್‌ನ ಮಹದೇವ ಪ್ರಸಾದ್, 15 ನೇ ವಾರ್ಡ್‌ನ ಮಹದೇವಮ್ಮ ಬಾಲಚಂದ್ರ, 31ನೇ ವಾರ್ಡ್‌ನ ನಾಗಮಣಿ ಶಂಕರಪ್ಪ ನಡುವೆ ಪೈಪೋಟಿ ನಡೆಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡುವುದಾದರೆ ಮಹದೇವಮ್ಮ ಬಾಲಚಂದ್ರ, ನಾಗಮಣಿ ಶಂಕರಪ್ಪ ಅಥವಾ ಪರಿಶಿಷ್ಟ ವರ್ಗದ ಮೀನಾಕ್ಷಿ ನಾಗರಾಜು ಸೇರಿದಂತೆ ಈ ಮೂವರು ಸದಸ್ಯರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ‘ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಬೆಂಗಳೂರಿನಲ್ಲಿದ್ದಾರೆ. ಮುಂದಿನ ವಾರ ಸಂಸದರ ಮೈಸೂರಿನ ಮನೆಯಲ್ಲಿ ಸಭೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಿದ್ದಾರೆ. ನಗರಸಭೆ ಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇರುವುದರಿಂದ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಬಿಜೆಪಿಗೆ ಸಿಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.