ADVERTISEMENT

ಜನರ ಬದುಕು ಬದಲಾಯಿಸಿದ ‘ಗ್ಯಾರಂಟಿ’: ಸಚಿವ ಕೆ.ವೆಂಕಟೇಶ್

ಕಾಮಗಾರಿಗೆ ಚಾಲನೆ: ಸಚಿವ ಕೆ. ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:38 IST
Last Updated 24 ನವೆಂಬರ್ 2025, 2:38 IST
ಪಿರಿಯಾಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿ ರಾಜ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೆ. ವೆಂಕಟೇಶ್ ಶನಿವಾರ ಚಾಲನೆ ನೀಡಿದರು. ರವಿ, ಸುನೀಲ್ ಕುಮಾರ್, ಗೋವಿಂದೇಗೌಡ, ಅಶೋಕ್ ಕುಮಾರ್ ಗೌಡ, ಸುರೇಶ್ ಭಾಗವಹಿಸಿದ್ದರು
ಪಿರಿಯಾಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿ ರಾಜ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೆ. ವೆಂಕಟೇಶ್ ಶನಿವಾರ ಚಾಲನೆ ನೀಡಿದರು. ರವಿ, ಸುನೀಲ್ ಕುಮಾರ್, ಗೋವಿಂದೇಗೌಡ, ಅಶೋಕ್ ಕುಮಾರ್ ಗೌಡ, ಸುರೇಶ್ ಭಾಗವಹಿಸಿದ್ದರು   

ಪಿರಿಯಾಪಟ್ಟಣ: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಬಲವನ್ನು ತುಂಬಿವೆ ಎಂದು ಹಲವು ಸಮೀಕ್ಷೆಗಳಿಂದ ಸಾಬೀತಾಗಿದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರೈತರ, ದೀನ ದಲಿತರ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಹಾಗೂ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಿದೆ. ಯಾವ ಸರ್ಕಾರ ಕೂಡ ಇಷ್ಟೆಲ್ಲಾ ಅಭಿವೃದ್ಧಿ ಯೋಜನೆ ನೀಡಿಲ್ಲ, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಟೀಕೆ ಮಾಡುವುದೊಂದೆ ದುರುದ್ದೇಶವಾಗಿದೆ ಎಂದು ದೂರಿದರು. ಇದರೊಂದಿಗೆ ಮಾಧ್ಯಮಗಳು ಕೂಡ ಸೇರಿವೆ, ಅಭಿವೃದ್ಧಿ ಯೋಜನೆಗೆ ಅನುದಾನ ಕೊರತೆ ಇಲ್ಲ, ಈ ಸುಳ್ಳು ಆರೋಪಗಳಿಗೆ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಮುಖಂಡ ಸೈಯ್ಯದ್ ರೆಹಮತ್ ಮಾತನಾಡಿದರು. ಎಂಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಲೋಕೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ. ಸ್ವಾಮಿ, ಟೌನ್ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಎಇಇಗಳಾದ ವೆಂಕಟೇಶ್, ಮಲ್ಲಿಕಾರ್ಜುನ, ದಿನೇಶ್, ಕೃಷ್ಣಮೂರ್ತಿ, ಸುಗಂಧ ರಾಜ್, ಪಶು ಇಲಾಖೆ ಅಧಿಕಾರಿ ಸೋಮಯ್ಯ, ಅರಣ್ಯ ಇಲಾಖೆಯ ಪದ್ಮಶ್ರೀ, ರೇಷ್ಮೆ ಇಲಾಖೆ ಚಂದ್ರೇಗೌಡ, ಅಬಕಾರಿ ಇಲಾಖೆ ಅಧಿಕಾರಿ ವೆಂಕಟೇಶ್, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ದರ್ಶನ, ಮುಖಂಡರಾದ ವಿಜಿ ಕೊಪ್ಪಲು ಲೋಕೇಶ್, ರಾವಂದೂರು ನಂದೀಶ್, ಅಯಾಜ್ ಪಾಷಾ, ಆರ್.ಎಸ್. ಮಹದೇವ್, ಇಮ್ರಾನ್ ಪಾಷಾ, ಸೈಯದ್ ಅಜ್ಮಲ್, ಸೈಯದ್ ಮುದಾ ಪೀರ್, ಶಾಸಕರ ಆಪ್ತ ಕಾರ್ಯದರ್ಶಿ ಮಹೇಂದ್ರ, ಪುರಸಭೆ ಸದಸ್ಯ ರವಿ, ಮಾಜಿ ಸದಸ್ಯ ಸುರೇಶ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.