ADVERTISEMENT

ಕಾಂಗ್ರೆಸ್‌ನಿಂದ ಟಾಸ್ಕ್‌ಫೋರ್ಸ್‌ ರಚನೆ

ಕೆಪಿಸಿಸಿ ರಿಲೀಫ್ ಫಂಡ್‌ಗೆ ದೇಣಿಗೆ ನೀಡುವಂತೆ ಪದಾಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:57 IST
Last Updated 2 ಏಪ್ರಿಲ್ 2020, 16:57 IST
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕೋವಿಡ್‌–19ಗೆ ಸಂಬಂಧಿಸಿದ ಸಭೆ ನಡೆಯಿತು
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕೋವಿಡ್‌–19ಗೆ ಸಂಬಂಧಿಸಿದ ಸಭೆ ನಡೆಯಿತು   

ಮೈಸೂರು: ಕೋವಿಡ್‌–19ನ ಸಂಕಷ್ಟದಲ್ಲಿ ಸಿಲುಕಿರುವ ಜಿಲ್ಲೆಯ ಜನರ ನೆರವಿಗೆ ಧಾವಿಸಲಿಕ್ಕಾಗಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ತನ್ನ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚನೆಗೆ ಗುರುವಾರ ಸೂಚನೆ ನೀಡಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.

ಪ್ರತಿ ಕ್ಷೇತ್ರದ ಟಾಸ್ಕ್‌ಪೋರ್ಸ್‌ನಲ್ಲೂ ಆ ಕ್ಷೇತ್ರದ ಶಾಸಕರು ಅಥವಾ ಪರಾಜಿತರು, ಬ್ಲಾಕ್ ಅಧ್ಯಕ್ಷರು ಹಾಗೂ 15 ಸದಸ್ಯರು ಇರಬೇಕು. ಕನಿಷ್ಠ ಎರಡು ಸಹಾಯವಾಣಿ ಸಂಖ್ಯೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ನಿರ್ಧರಿಸಿದೆ.

ADVERTISEMENT

ಶಾಸಕ ಎಚ್‌.ಪಿ.ಮಂಜುನಾಥ್, ಡಿಸಿಸಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ರಚನೆಯಾಗಿದ್ದು, ಪ್ರಮುಖ ಪದಾಧಿಕಾರಿಗಳು ಇದರಲ್ಲಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಎರಡು ಸಹಾಯವಾಣಿ ರಚಿಸಿದ್ದು, ನೆರವು ಬೇಕಿದ್ದವರು 8296769577/9741392799 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯರು ₹ 10,000, ತಾಲ್ಲೂಕು ಪಂಚಾಯಿತಿ ಸದಸ್ಯರು ₹ 5000, ನಗರಸಭೆ ಹಾಗೂ ಪುರಸಭೆ ಸದಸ್ಯರು ₹ 2500 ರೂಪಾಯಿಯನ್ನು ಕೆಪಿಸಿಸಿ ರಿಲೀಫ್ ಫಂಡ್, A/c 0788101056855, ಕೆನರಾ ಬ್ಯಾಂಕ್, ಬೆಂಗಳೂರು, IFSC CODE–CNRB0000788 ಇಲ್ಲಿಗೆ ಚೆಕ್ ಅಥವಾ ಡಿ.ಡಿ.ಯನ್ನು ಸಂಬಂಧಿಸಿದ ಬ್ಲಾಕ್ ಅಧ್ಯಕ್ಷರ ಮೂಲಕವೇ ತಲುಪಿಸಬೇಕು. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಹ ಕೆಪಿಸಿಸಿ ವಿಪತ್ತು ನಿಧಿಗೆ ದೇಣಿಗೆ ನೀಡಬಹುದಾಗಿದೆ ಎಂಬ ತೀರ್ಮಾನ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.