ADVERTISEMENT

ಕಾಂಗ್ರೆಸ್‌ ಮತ್ತೆ ಪುಟಿದೇಳಲಿದೆ: ವಿಜಯಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಮೇ 2019, 18:55 IST
Last Updated 23 ಮೇ 2019, 18:55 IST
ವಿಜಯಕುಮಾರ್
ವಿಜಯಕುಮಾರ್   

ಮೈಸೂರು: ‘ಕಾಂಗ್ರೆಸ್‌ ಪಕ್ಷವು ಸಮಾಜವಾದದ ಸಿದ್ಧಾಂತದಮೇಲೆ ರಾಜಕಾರಣ ಮತ್ತು ಅಧಿಕಾರ ನಡೆಸಿದೆ. ಅದೇ ಆಧಾರದಲ್ಲಿ ಮತ್ತೆ ಪ್ರಪಂಚ ನಿಬ್ಬೆರಾಗುವ ರೀತಿಯಲ್ಲಿ ಪುಟಿದೇಳಲಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

‘ರಾಷ್ಟ್ರವು 70 ವರ್ಷಗಳಿಂದ ಸಮಾಜವಾದದ ಹಿಂದೆ ಸಾಗುತ್ತಾ ಬಂದಿದೆ. ಆದರೆ, ಈಗ ಹಿಂದುತ್ವ ಮತ್ತು ಭಾವನಾತ್ಮಕವಾದ ಸಂಬಂಧಗಳ ಹಿಂದೆ ಸಾಗಿದೆ. ಈ ವಿಚಾರಗಳು ಶಾಶ್ವತವಾದ ಸ್ಥಿರ ಸಿದ್ಧಾಂತಗಳು ಅಲ್ಲ. ಬಹಳಷ್ಟು ವರ್ಷ ದೇಶದ ರಾಜಕಾರಣದ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಸೇನೆಗೆ ಸಂಬಂಧಿಸಿದ ಪುಲ್ವಾಮ ಹಾಗೂ ಬಾಲ್‌ಕೋಟ್‌ ಘಟನೆಗಳನ್ನು ಭಾವನಾತ್ಮಕವಾಗಿ ಒಪ್ಪಿ ಒಂದು ಪಕ್ಷದ ಪರವಾಗಿ ಮತ ನೀಡಿದ ಯುವ ವರ್ಗ ಒಂದು ಕಡೆಯಾದರೆ, ಹಿಂದುತ್ವವನ್ನು ಒಪ್ಪಿಕೊಳ್ಳುವ ಮೂಲಕ ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಸ್ಥಿತಿ ಇವತ್ತಿನ ಚುನಾವಣೆ ಫಲಿತಾಂಶವೇ ಕಾರಣ’ ಎಂದು ಹೇಳಿದರು.

‘ಪ್ರಜಾತಂತ್ರ ವ್ಯವಸ್ಥೆಯೊಳಗೆ ಜನಾದೇಶವನ್ನು ಗೌರವಿಸುತ್ತೇನೆ. ಗೆದ್ದವರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.