ADVERTISEMENT

ವಾಣಿ ವಿಲಾಸ ನೀರು ಸರಬರಾಜು ವಿಭಾಗದಲ್ಲಿ ಭ್ರಷ್ಟಾಚಾರ; ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 11:54 IST
Last Updated 4 ಅಕ್ಟೋಬರ್ 2021, 11:54 IST

ಮೈಸೂರು: ‘ಇಲ್ಲಿನ ಮಹಾನಗರ ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ವಿಭಾಗದಲ್ಲಿ ನಾಲ್ವರನ್ನು ಕಾಯಂಗೊಳಿಸಿದ್ದು, ಈ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಮೈಸೂರು ಮಹಾನಗರ ಪಾಲಿಕೆ ವಾಣಿ ವಿಲಾಸ ನೀರು ಸರಬರಾಜು ಮಂಡಳಿ ವರ್ಕರ್ಸ್‌ ಯೂನಿಯನ್‌ನ ಅಧ್ಯಕ್ಷ ಎಸ್.ಶಾಂತಪ್ಪ ಸೋಮವಾರ ಇಲ್ಲಿ ದೂರಿದರು.

‘300 ಜನರು 15 ವರ್ಷದಿಂದ ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದರೂ; ಕೇವಲ ನಾಲ್ಕು ಮಂದಿಯನ್ನಷ್ಟೇ ಕಾಯಂಗೊಳಿಸಿದ್ದಾರೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್‌ ಹಾಕುತ್ತೇವೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗುತ್ತಿಗೆ ಪದ್ಧತಿಯನ್ನು 2012ರಲ್ಲೇ ರದ್ದುಗೊಳಿಸಲಾಗಿದೆ. ಆದರೂ 200 ಹೊರ ಗುತ್ತಿಗೆ ನೌಕರರನ್ನು ಅಕ್ರಮವಾಗಿ ನೇಮಿಸಿಕೊಳ್ಳಲಾಗಿದೆ’ ಎಂದು ಶಾಂತಪ್ಪ ಆರೋಪಿಸಿದರು.

ADVERTISEMENT

ಡಿ.ಎಂ.ಕೆಂಚಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.