ADVERTISEMENT

ತೆರಿಗೆ ಸಂದಾಯದಿಂದ ದೇಶ ಅಭಿವೃದ್ಧಿ: ಎಂ.ಸಿ. ಸುಂದರ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 5:02 IST
Last Updated 28 ಏಪ್ರಿಲ್ 2024, 5:02 IST
ನಟರಾಜ ಸ್ನಾತಕೋತ್ತರ ಅಧ್ಯಯನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಎಸ್. ಶಿವರಾಜಪ್ಪ, ಎಂ.ಸಿ. ಸುಂದರ್ ಉದ್ಘಾಟಿಸಿದರು. ಪ್ರಾಂಶುಪಾಲೆ ಎಂ.ಶಾರದ ಭಾಗವಹಿಸಿದ್ದರು
ನಟರಾಜ ಸ್ನಾತಕೋತ್ತರ ಅಧ್ಯಯನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಎಸ್. ಶಿವರಾಜಪ್ಪ, ಎಂ.ಸಿ. ಸುಂದರ್ ಉದ್ಘಾಟಿಸಿದರು. ಪ್ರಾಂಶುಪಾಲೆ ಎಂ.ಶಾರದ ಭಾಗವಹಿಸಿದ್ದರು   

ಮೈಸೂರು: ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ತೆರಿಗೆ ಸಂದಾಯ ಅತಿ ಮುಖ್ಯ. ಆದಾಯ ತೆರಿಗೆ ಪಿಡುಗಲ್ಲ. ಅದು ದೇಶದ ಅಭಿವೃದ್ಧಿಗೆ ಪೂರಕ’ ಎಂದು ನಗರದ ಲೆಕ್ಕ ಪರಿಶೋಧಕ ಮತ್ತು ತೆರಿಗೆ ಸಲಹೆಗಾರ ಎಂ.ಸಿ. ಸುಂದರ್ ಹೇಳಿದರು.

ಇಲ್ಲಿನ ಹೊಸಮಠದ ನಟರಾಜ ಸ್ನಾತಕೋತ್ತರ ಅಧ್ಯಯನ ಕಾಲೇಜಿನಲ್ಲಿ ನಟರಾಜ ಪ್ರತಿಷ್ಠಾನದಿಂದ ಎಂ.ಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಪ್ರತಿಯೊಬ್ಬರು ತೆರಿಗೆ ಪಾವತಿಯನ್ನು ಮೂಲಭೂತ ಕರ್ತವ್ಯವೆಂದು ಭಾವಿಸಬೇಕು. ಆಯಾಕಾಲಕ್ಕೆ ಬದಲಾಗುವ ತೆರಿಗೆ ನಿಯಮ ಅರ್ಥೈಸಿಕೊಂದು ಅದರಂತೆ ಪಾವತಿಸಬೇಕು’ ಎಂದು ಹೇಳಿದರು.

ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ‘ಸಕಾಲದಲ್ಲಿ ಸೂಕ್ತವಾಗಿ ತೆರಿಗೆ ಪಾವತಿಸಿದರೆ ಭವ್ಯ ಭಾರತ ನಿರ್ಮಾಣದಲ್ಲಿ ಸಂಶಯವಿಲ್ಲ. ತೆರಿಗೆ ಬಗ್ಗೆ ಎಂ.ಕಾಂ ಮತ್ತು ಬಿ.ಕಾಂ ವಿದ್ಯಾರ್ಥಿಗಳು ತಲಸ್ಪರ್ಶಿ ಅಧ್ಯಯನ ಮಾಡಬೇಕು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.