ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ನಡೆಯುತ್ತಿರುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ನೇರ ಪ್ರಸಾರವಾಗುತ್ತಿವೆ.
ಫೇಸ್ಬುಕ್ ಪೇಜ್ ಲಿಂಕ್ https://www.facebook.com/mysorevarthe/ ಈ ಪೇಜ್ನಲ್ಲಿ ನೇರ ಪ್ರಸಾರ ಸಿಗುತ್ತದೆ.
ಈ ಪೇಜ್ ಅನ್ನು ಲೈಕ್ ಮಾಡಿ ಫಾಲೊ ಮಾಡಿದ್ದಲ್ಲಿ, ಫೇಸ್ಬುಕ್ ನೇರ ಪ್ರಸಾರ ಆರಂಭವಾಗುತ್ತಿದ್ದಂತೆ ಮೊಬೈಲ್ಗೆ ನೋಟಿಫಿಕೇಶನ್ ಬರಲಿದೆ. ಈ ಪೇಜ್ನಲ್ಲಿ ಕಾರ್ಯಕ್ರಮಗಳ ಮಾಹಿತಿಯನ್ನು ಸಹ ಆಗಾಗ್ಗೆ ಪ್ರಕಟಿಸಲಾಗುತ್ತದೆ.
ಇದಲ್ಲದೆ ಯೂಟ್ಯೂಬ್ನಲ್ಲಿಯೂ ನೇರ ಪ್ರಸಾರವಾಗಲಿದ್ದು, ಈ ಲಿಂಕ್ https://www.youtube.com/playlist?list=PLvhg-sbsHV_ybFvK6Iu7HLoaOmh3yCcVC ಮೂಲಕ ವೀಕ್ಷಿಸಬಹುದು.
ಅ.24ರವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇವು ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ನೇರ ಪ್ರಸಾರವಾಗಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.