ಮೈಸೂರು: ಅಂಚೆ ಇಲಾಖೆಯಿಂದ ನಗರದ ದೊಡ್ಡ ಗಡಿಯಾರದ ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆ ಮಾಡಲಾಯಿತು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ಮುದ್ರೆಯನ್ನು ಬಿಡುಗಡೆ ಮಾಡಿ ಮಾತನಾಡಿ, ‘ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಆ ಸ್ಥಳದ ಪ್ರಾಮುಖ್ಯತೆಯನ್ನು ಜಗತ್ತಿಗೆ ಪ್ರಚುರ ಪಡಿಸುವಲ್ಲಿ ಚಿತ್ರಾತ್ಮಕ ಮುದ್ರೆಗಳು ಪ್ರಮುಖ ಪಾತ್ರವಹಿಸುತ್ತವೆ’ ಎಂದರು.
ವಿಭಾಗದ ಉಪ ಅಧೀಕ್ಷಕ ವಿ.ಎಲ್. ನವೀನ್ ಮಾತನಾಡಿ, ‘ದೊಡ್ಡ ಗಡಿಯಾರ ಮೈಸೂರಿನ ಪ್ರಮುಖ ಆಕರ್ಷಣೆ. ಇನ್ನೆರಡು ವರ್ಷಗಳಲ್ಲಿ ಅದಕ್ಕೆ 100 ವರ್ಷಗಳಾಗಲಿದ್ದು, ಅಂಚೆ ಇಲಾಖೆ ವಿಶೇಷ ಲಕೋಟೆ ಅಥವಾ ಚಿತ್ರಿತ ಅಂಚೆ ಕಾರ್ಡ್ ಅನ್ನು ಹೊರತರುವ ಆಶಯವನ್ನು ಹೊಂದಿದೆ’ ಎಂದು ತಿಳಿಸಿದರು.
ಕಚೇರಿಯ ಹಿರಿಯ ಅಂಚೆ ಪಾಲಕ ಸೋಮಯ್ಯ, ಪ್ರಭಾರ ಅಂಚೆ ಪಾಲಕ ಬಿ.ಮಹದೇವಸ್ವಾಮಿ, ಮಾರುಕಟ್ಟೆ ವ್ಯವಸ್ಥಾಪಕ ಅಮ್ಮಸಂದ್ರ ಸುರೇಶ್, ನಿವೇದಿತಾ, ರೇಣುಕಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.