ಧರ್ಮಾಪುರ: ಗ್ರಾಮದಲ್ಲಿ ಮಂಗಳವಾರ ಈಶ್ವರ, ಮಾದೇಶ್ವರ ಸ್ವಾಮಿಯ ಕೊಂಡೋತ್ಸವ ನಡೆಯಲಿದೆ.
ಸೋಮವಾರ ರಾತ್ರಿ ದೇವಾಲಯದಲ್ಲಿ ಹೋಮ ಹವನ ನಡೆಯಲಿದೆ, ನಂತರ ರಾತ್ರಿ 11 ಗಂಟೆಗೆ ಕೊಂಡಕ್ಕೆ ಕರ್ಪೂರವನ್ನು ಹಚ್ಚುವುದರ ಮೂಲಕ ಕೊಂಡೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಮಂಗಳವಾರ ಬೆಳಿಗ್ಗೆ 7 ಗಂಟೆಗೆ ದೇವರ ಉತ್ಸವಮೂರ್ತಿಗಳನ್ನು ಗ್ರಾಮದ ಮೂಡಲ ಕೆರೆಯಲ್ಲಿ ಪೂಜಾದಿ ಕಾರ್ಯಕ್ರಮಗಳನ್ನು ಮುಗಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಾಲಯದ ಬಳಿ ಈಶ್ವರ ಮಾದೇಶ್ವರ ಸ್ವಾಮಿಯ ಅರ್ಚಕರು ಕೊಂಡ ಹಾಯುತ್ತಾರೆ. ನಂತರ ಭಕ್ತರು ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
ಚಕ್ಕಡಿ ಓಟದ ಸ್ಪರ್ಧೆ: ಕೊಂಡೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಮಂಗಳವಾರ ಚಕ್ಕಡಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ಸ್ಪರ್ಧೆಯಲ್ಲಿ ಎರಡು ಹಲ್ಲಿನ ಕರುಗಳು, ಹಳ್ಳಿಕಾರ್ ಕರುಗಳು ಭಾಗವಹಿಸಲು ಅವಕಾಶ ಇದೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ ಬಹುಮಾನವನ್ನು ನೀಡಲಾಗುತ್ತದೆ.
ಅನ್ನ ಸಂತರ್ಪಣೆ: ಕೊಂಡೋತ್ಸವ ಮುಗಿದ ನಂತರ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಕೊಂಡೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಹಳ್ಳದ ಕೊಪ್ಪಲು, ಮಲ್ಲೇಗೌಡನ ಕೊಪ್ಪಲು, ಗದ್ದಿಗೆ, ನಾಡಪನಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.