ADVERTISEMENT

ಮೈಸೂರು: ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:15 IST
Last Updated 7 ಜೂನ್ 2025, 14:15 IST
ಮೈಸೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ನಿರ್ಮಿಸುತ್ತಿರುವ ಭವನಕ್ಕೆ ನೀಡಲಾದ ₹ 50.22 ಲಕ್ಷದ ಚೆಕ್‌ ಅನ್ನು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಈಶ್ವರಖಂಡ್ರೆ ಹಸ್ತಾಂತರಿಸಿದರು
ಮೈಸೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ನಿರ್ಮಿಸುತ್ತಿರುವ ಭವನಕ್ಕೆ ನೀಡಲಾದ ₹ 50.22 ಲಕ್ಷದ ಚೆಕ್‌ ಅನ್ನು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಈಶ್ವರಖಂಡ್ರೆ ಹಸ್ತಾಂತರಿಸಿದರು   

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ನಿರ್ಮಿಸುತ್ತಿರುವ ಭವನಕ್ಕೆ ಮಹಾಸಭಾದಿಂದ ಜಿಲ್ಲೆಯ ಸದಸ್ಯತ್ವದ ಸಂಗ್ರಹದಿಂದ ಕೊಡಮಾಡುವ ₹ 50.22 ಲಕ್ಷವನ್ನು ಮಹಾಸಭಾದ ರಾಷ್ಟ್ರೀಯ  ಉಪಾಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಜಿಲ್ಲಾ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭವನ ನಿರ್ಮಾಣಕ್ಕಾಗಿ ರಾಜ್‌ಕುಮಾರ್‌ ರಸ್ತೆಯಲ್ಲಿ ಜಾಗ ಮಂಜೂರಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಯ ಸಂಘವು ಜಿಲ್ಲೆಯಿಂದ ಸಂಗ್ರಹಿಸಿದ ಸದಸ್ಯತ್ವ ಶುಲ್ಕದ ಶೇ 90 ಅನ್ನು ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತಿದೆ. ಇದಲ್ಲದೆ ಸಂಘದಿಂದ ₹ 50 ಲಕ್ಷ ಬಡ್ಡಿ ರಹಿತ ಸಾಲ ಒದಗಿಸಲಾಗಿದೆ’ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ವಿ.ಬಸವರಾಜ್‌ ಹಿನಕಲ್‌ ತಿಳಿಸಿದರು.

ಮಹಾಸಭಾದ ಪದಾಧಿಕಾರಿಗಳಾದ ಭಾಗ್ಯರಾಜು, ಬಿ.ವಿ.ಬಸವರಾಜು, ಕೆ.ಕೆ.ಖಂಡೇಶ್‌, ಶಿವಕುಮಾರ್‌, ನಟರಾಜ್‌, ಗಿರಿಕುಮಾರ್, ಧರ್ಮಾ ಮಂಜುನಾಥ್‌, ಅನುಸೂಯ ಗಣೇಶ್‌, ಬಸವರಾಜ್‌, ಮಹೇಶ್‌ ಗೆದ್ದಗಳ್ಳಿ, ಪರಮೇಶ್‌ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.