ADVERTISEMENT

‘ಮತ ಮಾರಿಕೊಳ್ಳಬೇಡಿ’ ಆಂದೋಲನ

ಶ್ರೀರಂಗಪಟ್ಟಣದ ಕಡತನಾಳು ಗ್ರಾಮದಲ್ಲಿ ಜಾಗೃತಿ

ಗಣಂಗೂರು ನಂಜೇಗೌಡ
Published 26 ಡಿಸೆಂಬರ್ 2020, 17:02 IST
Last Updated 26 ಡಿಸೆಂಬರ್ 2020, 17:02 IST
ಶ್ರೀರಂಗಪಟ್ಟಣದ ಕಡತನಾಳು ಗ್ರಾಮದಲ್ಲಿ ಸಮರ್ಪಣಾ ಟ್ರಸ್ಟ್‌ ವತಿಯಿಂದ ‘ಮತ ಪವಿತ್ರವಾದುದು; ಮಾರಿಕೊಳ್ಳಬೇಡಿ’ ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು
ಶ್ರೀರಂಗಪಟ್ಟಣದ ಕಡತನಾಳು ಗ್ರಾಮದಲ್ಲಿ ಸಮರ್ಪಣಾ ಟ್ರಸ್ಟ್‌ ವತಿಯಿಂದ ‘ಮತ ಪವಿತ್ರವಾದುದು; ಮಾರಿಕೊಳ್ಳಬೇಡಿ’ ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು   

ಶ್ರೀರಂಗಪಟ್ಟಣ: ಗ್ರಾ.ಪಂ. ಚುನಾವಣೆಯಲ್ಲಿ ಆಮಿಷಕ್ಕೆ ಒಳಗಾಗಿ ಅಸಮರ್ಥರಿಗೆ ಮತ ಹಾಕದಂತೆ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯ ತಾಲ್ಲೂಕಿನ ಕಡತನಾಳು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ಜಯಶಂಕರ್‌ ನೇತೃತ್ವದ ತಂಡ ಬ್ಯಾನರ್‌ಗಳನ್ನು ಬರೆಸಿ ಅಲ್ಲಲ್ಲಿ ಹಾಕಿದೆ.

‘ಮತ ಪವಿತ್ರವಾದುದು; ಅದನ್ನು ಮಾರಿಕೊಳ್ಳಬೇಡಿ’ ಎಂಬ ಒಕ್ಕಣೆಯ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅದರ ಜತೆಗೆ ಅಂಬೇಡ್ಕರ್‌ ಅವರು ಹೇಳಿರುವ ‘ಬದುಕಲು ರಾಜಕೀಯಕ್ಕೆ ಬರಬೇಡಿ; ಬದುಕನ್ನು ಬದಲಿಸಲು ರಾಜಕೀಯಕ್ಕೆ ಬನ್ನಿ’, ‘ರಾಜಕೀಯ ಉದ್ಯೋಗವಲ್ಲ; ಜವಾಬ್ದಾರಿ’, ‘ಚುನಾ ವಣೆ ಪ್ರಜಾಪ್ರಭುತ್ವದ ಅಡಿಪಾಯ’, ‘ಕಡ್ಡಾಯವಾಗಿ ಮತ ಹಾಕೋಣ; ಬಲಿಷ್ಠ ರಾಷ್ಟ್ರ ಕಟ್ಟೋಣ’ ಮೊದಲಾದ ಸಂದೇಶಗಳು ಇರುವ ಬ್ಯಾನರ್‌ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ADVERTISEMENT

‘ಹಣ, ಹೆಂಡ, ಸೀರೆ, ಪಂಚೆ, ಬಾಡೂಟಕ್ಕೆ ಮತವನ್ನು ಮಾರಿ ಕೊಳ್ಳುವ ಪ್ರವೃತ್ತಿ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಅಸಂಬದ್ಧಗಳು ಹೆಚ್ಚಾಗಿ ನಡೆಯುತ್ತಿವೆ. ಅದನ್ನು ಸಾಧ್ಯ ವಾದಷ್ಟು ತಡೆಯಲು, ಮತದಾರರ ಜವಾಬ್ದಾರಿಯನ್ನು ತಿಳಿಸಿಕೊಡಲು ಸಮರ್ಪಣಾ ಟ್ರಸ್ಟ್‌ನಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಕ್ಷಣಿಕ ತೃಪ್ತಿಗೆ ತಮ್ಮ ಮತ ಮಾರಿಕೊಳ್ಳಬಾರದು’ ಎಂದು ಜಯಶಂಕರ್‌ ಹೇಳುತ್ತಾರೆ.

‘ಆಮಿಷಕ್ಕೆ ಒಳಗಾದರೆ ಜನಪ್ರತಿನಿಧಿ ಗಳನ್ನು ಪ್ರಶ್ನಿಸುವ ನೈತಿಕತೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಳಂಕ. ಮತದಾರರು ತಮ್ಮ ಮತವನ್ನು ಪ್ರಾಮಾ ಣಿಕರು ಮತ್ತು ಪ್ರಬುದ್ಧರಿಗೆ ಹಾಕಬೇಕು. ‘ನಮ್ಮ ಮತ ನಮ್ಮ ಅಧಿಕಾರ’ ಎಂಬು ದನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಜಯಶಂಕರ್ ಅಭಿಮತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.