ಮೈಸೂರು: ಸೋಮವಾರ ಮೈಸೂರಿಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ‘ವಜ್ರ ಮಹೋತ್ಸವ‘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ರೌಪದಿ ಮುರ್ಮು ಅವರ ಕಡೆಗೆ ತಿರುಗಿ ‘ಕನ್ನಡ ನಿಮಗೆ ಗೊತ್ತಾಗುತ್ತಾ... ಯು ನೋ ಕನ್ನಡ’ ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುರ್ಮು ಅವರು, ‘ನಿಮ್ಮ ಮಾತೃಭಾಷೆ ಗೊತ್ತಿಲ್ಲ. ಕರ್ನಾಟಕದ ಭಾಷೆಯಲ್ಲದೇ ಭಾರತದಲ್ಲಿರುವ ಬಹು ಭಾಷಾ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವುದು, ಗೌರವಿಸುವುದು ಹಾಗೂ ಸಮ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ. ಶೀಘ್ರದಲ್ಲೇ ಸ್ವಲ್ಪವಾದರೂ ಕನ್ನಡ ಕಲಿಯುವೆ’ ಎಂದು ಹೇಳಿ ನಕ್ಕಿದ್ದಾರೆ.
ನಿನ್ನೆ ಸಂಜೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುರ್ಮು ಅವರನ್ನು ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸ್ವಾಗತಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.