ADVERTISEMENT

ಧರ್ಮಗುರು ಆಶೀರ್ವಾದ ಕೋರಿದ ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 16:30 IST
Last Updated 25 ಮಾರ್ಚ್ 2024, 16:30 IST
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಮುಸ್ಲಿಂ ಧರ್ಮಗುರು ಉಷ್ಮಾನ್‌ ಷರೀಫ್‌ ಅವರನ್ನು ಸೋಮವಾರ ಭೇಟಿಯಾಗಿ ಆಶೀರ್ವಾದ ಪಡೆದರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಮುಸ್ಲಿಂ ಧರ್ಮಗುರು ಉಷ್ಮಾನ್‌ ಷರೀಫ್‌ ಅವರನ್ನು ಸೋಮವಾರ ಭೇಟಿಯಾಗಿ ಆಶೀರ್ವಾದ ಪಡೆದರು   

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ನಗರದಲ್ಲಿ ಸೋಮವಾರ ಧರ್ಮಗುರುಗಳನ್ನು ಭೇಟಿಯಾಗಿ ಆಶೀರ್ವಾದ ಕೋರಿದರು.

ಮುಸ್ಲಿಂ ಧರ್ಮಗುರು ಉಷ್ಮಾನ್‌ ಷರೀಫ್‌ ಅವರ ಆಶೀರ್ವಾದ ಪಡೆದು ಚರ್ಚಿಸಿದರು. ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ಲ, ನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೈಸರ್ ಅಹಮದ್, ನಗರಪಾಲಿಕೆ ಮಾಜಿ ಸದಸ್ಯ ಹಜರತ್‌ ಉಲ್ಲಾ, ವಕ್ತಾರ ಮಹೇಶ್ ಕೆ. ಪಾಲ್ಗೊಂಡಿದ್ದರು.

ಖಿಲ್ಲೆ ಮೊಹಲ್ಲಾದಲ್ಲಿರುವ ಹೊಸಮಠದ ಚಿದಾನಂದ ಸ್ವಾಮೀಜಿ, ಬನ್ನಿಮಂಟಪದಲ್ಲಿ ಕ್ರೈಸ್ತ ಧರ್ಮಗುರು ರೆ.ಬರ್ನಾಡ್ ಮೊರಾಸ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಆಲ್‌ಫ್ರೆಡ್ ಜಾನ್ ಮೆನ್ಡೋನ್ಸ, ಡೊಮಿನಿಕ್ ಜೇಮ್ಸ್, ಜೋಸೆಫ್ ಪಾಕಿಯರಾಜ್‌, ಮುಖಂಡರಾದ ನಜರ್‌ಬಾದ್‌ ನಟರಾಜ್‌, ವೀಣಾ ವಿಲಿಯಂ, ಎನ್.ಆರ್. ನಾಗೇಶ್ ಮೊದಲಾದವರು ಜೊತೆಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.