ADVERTISEMENT

ಎಂಆರ್‌ಸಿ: ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:32 IST
Last Updated 18 ಆಗಸ್ಟ್ 2022, 15:32 IST
ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಆಯೋಜಿದ್ದ ಉಚಿತ ನೇತ್ರ ತಪಾಸಣೆ ಶಿಬಿರದ ಉದ್ಘಾಟನೆ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಜಯಚಾಮರಾಜ ಒಡೆಯರ್‌ ಭಾವಚಿತ್ರ ಅನಾವರಣಗೊಳಿಸಿದರು/ ಪ್ರಜಾವಾಣಿ ಚಿತ್ರ
ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಆಯೋಜಿದ್ದ ಉಚಿತ ನೇತ್ರ ತಪಾಸಣೆ ಶಿಬಿರದ ಉದ್ಘಾಟನೆ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಜಯಚಾಮರಾಜ ಒಡೆಯರ್‌ ಭಾವಚಿತ್ರ ಅನಾವರಣಗೊಳಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಸಿದ್ದಾರ್ಥ ನಗರದ ಮೈಸೂರು ರೇಸ್ ಕ್ಲಬ್‌ (ಎಂಆರ್‌ಸಿ) ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮೆಗಾ ಶಿಬಿರವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಗುರುವಾರ ಉದ್ಘಾಟಿಸಿದರು.

ಮೈಸೂರು ರೇಸ್ ಕ್ಲಬ್‌ ಚಾರಿಟಬಲ್‌ ಟ್ರಸ್ಟ್‌ನಿಂದ ಶಿಬಿರ ಆಯೋಜಿಸಲಾಆಗಿದೆ. ಜಯಚಾಮರಾಜ ಒಡೆಯರ್‌ ಅವರ 103ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು.

ಆಸ್ಪತ್ರೆಯಲ್ಲಿ ದೊರೆಯುವ ಸೇವೆಗಳ ಮಾಹಿತಿಯನ್ನು ಪಡೆದ ರಾಜ್ಯಪಾಲರು, ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಕೈಗೆಟಕುವ ರೀತಿಯಲ್ಲಿ ಸೇವೆಯ ಉಪಕ್ರಮ ಕೈಗೊಂಡಿರುವ ಪದಾಧಿಕಾರಿಗಳನ್ನು ಅಭಿನಂದಿಸಿದರು.

ADVERTISEMENT

53 ಮಂದಿ ತಪಾಸಣೆಗೆ ಒಳಗಾದರು.

ಎಂಆರ್‌ಸಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ವೈ.ಬಿ.ಗಣೇಶ್, ಟ್ರಸ್ಟಿಗಳಾದ ಕೆ.ಎಂ.ಚಂದ್ರೇಗೌಡ, ಡಾ.ಸಿ.ಡಿ.ಶ್ರೀನಿವಾಸಮೂರ್ತಿ, ಚಂದುರಂಗ ಕಾಂತರಾಜೇ ಅರಸ್, ದುಶ್ಯಂತ ಪ್ರಸಾದ್, ಎಂಆರ್‌ಸಿ ಸಮಿತಿ ಸದಸ್ಯರಾದ ಕೆ.ಎಚ್.ರಮೇಶ್, ವೈ.ಪಿ.ಉದಯಶಂಕರ್, ಜಯರಾಜೇ ಅರಸ್, ಎಂ.ಎಲ್.ಕಾಂತರಾಜೇ ಅರಸ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.