ಪಿರಿಯಾಪಟ್ಟಣ: ತಾಲ್ಲೂಕಿನ ರಾಮನಾಥತುಂಗ ಗ್ರಾಮದ ರೈತ ರಾಮಚಂದ್ರ (48), ಮಂಗಳವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
‘ಇವರಿಗೆ ಒಂದು ಎಕರೆ ಜಮೀನಿದ್ದು ದೊಡ್ಡಬೇಲಾಳು ಪಿಎಸಿಸಿಎಸ್‌ನಲ್ಲಿ ₹ 50 ಸಾವಿರ ಕೃಷಿ ಸಾಲ ಹಾಗೂ ಸುಮಾರು ₹ 3 ಲಕ್ಷ ಕೈ ಸಾಲ ಪಡೆದಿದ್ದರು. ಬೆಳೆ ಬಾರದಿದ್ದರಿಂದ ಮನನೊಂದು ಮಂಗಳವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ’ ಎಂದು ಅವರ ಪತ್ನಿ ರೇಣುಕಾ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.