ADVERTISEMENT

ಪರಿಹಾರ ಪ್ಯಾಕೇಜ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 15:44 IST
Last Updated 18 ಜೂನ್ 2020, 15:44 IST
ಫುಡ್ ಡೆಲಿವರಿ ಪಾರ್ಟ್‌ನರ್ಸ್ ಯೂನಿಯನ್ ನೇತೃತ್ವದಲ್ಲಿ ಗುರುವಾರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಡೆಲಿವರಿ ಬಾಯ್‌ಗಳು ಪ್ರತಿಭಟಿಸಿದರು
ಫುಡ್ ಡೆಲಿವರಿ ಪಾರ್ಟ್‌ನರ್ಸ್ ಯೂನಿಯನ್ ನೇತೃತ್ವದಲ್ಲಿ ಗುರುವಾರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಡೆಲಿವರಿ ಬಾಯ್‌ಗಳು ಪ್ರತಿಭಟಿಸಿದರು   

ಮೈಸೂರು: ಫುಡ್ ಡೆಲಿವರಿ ಪಾರ್ಟ್‌ನರ್‌ಗಳಿಗೆ ಇನ್‌ಸೆಂಟಿವ್ ಮತ್ತು ರೇಟ್ ಕಾರ್ಡ್ ಬದಲಾಯಿಸಬೇಡಿ. ಕೋವಿಡ್–19 ಪರಿಹಾರ ಪ್ಯಾಕೇಜ್ ಘೋಷಿಸಿ ಎಂದು ಒತ್ತಾಯಿಸಿ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‌ನರ್ಸ್ ಯೂನಿಯನ್ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲಾಯಿತು.

ಫುಡ್ ಡೆಲಿವರಿ ಪಾರ್ಟ್‌ನರ್ಸ್ ಪೀಸ್ ರೇಟ್ ಆಧಾರದಲ್ಲಿ ದುಡಿಯುತ್ತಾರೆ. ಕೋವಿಡ್ ಸಂಕಷ್ಟದಲ್ಲಿ ಆರ್ಡರ್ ಸಂಖ್ಯೆಯೂ ಗಣನೀಯವಾಗಿ ಕುಸಿದಿದ್ದು, ಬಿಡಿಗಾಸಿಗೆ ದುಡಿಯುವಂತಾಗಿದೆ.

ಲಾಕ್‌ಡೌನ್ ಸಮಯದಲ್ಲಿ ಫುಡ್ ಡೆಲಿವರಿ ಪಾರ್ಟ್‌ನರ್ಸ್‌ಗಳನ್ನು ಅಗತ್ಯ ಸೇವೆಗಳಡಿ ಸರ್ಕಾರ ಗುರುತಿಸಿತ್ತು. ರಾಜ್ಯ ಸರ್ಕಾರ ನೋಂದಾಯಿತ ಗಾರೆ ಕೆಲಸಗಾರರಿಗೆ, ಆಟೊ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಿದಂತೆಯೇ, ನಮಗೂ ನೆರವು ನೀಡಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಯಾವೊಬ್ಬ ಫುಡ್ ಡೆಲಿವರಿ ಪಾರ್ಟ್‌ನರ್ಸ್ ಐಡಿ ಬ್ಲಾಕ್ ಮಾಡದಿರುವಂತೆ ಸ್ವಿಗ್ಗಿ, ಜೊಮ್ಯಾಟೋ, ಡನ್ಹೋದಂತಹ ವಿವಿಧ ಪ್ಲಾಟ್ ಫಾರ್ಮ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಾಸ್ಕ್, ಸ್ಯಾನಿಟೈಸರ್ ಪೂರೈಸುವಂತೆ ಕಂಪನಿಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.