ADVERTISEMENT

ಹಂಪಾಪುರ‌: ಬೋನಿಗೆ ಬಿದ್ದ 4 ವರ್ಷದ ಚಿರತೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:01 IST
Last Updated 12 ಆಗಸ್ಟ್ 2022, 5:01 IST
ಚಿಕ್ಕೆರೆಯೂರು ಗ್ರಾಮದ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಚಿಕ್ಕೆರೆಯೂರು ಗ್ರಾಮದ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ   

ಹಂಪಾಪುರ‌(ಮೈಸೂರು ‌ಜಿಲ್ಲೆ):ಸಮೀಪದ ಚಿಕ್ಕೆರೆಯೂರು ಗ್ರಾಮದ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಶುಕ್ರವಾರ ಚಿರತೆ ಬಿದ್ದಿದೆ. ಗ್ರಾಮದ ಅನಂದ ಎಂಬುವವರ ಜಮೀನಿನಲ್ಲಿ ಬೋನಿಡಲಾಗಿತ್ತು. ಅದು ಗಂಡು‌ ಚಿರತೆ ಆಗಿದ್ದು, 4 ವರ್ಷ ವಯಸ್ಸಿನದ್ದು ಎನ್ನಲಾಗಿದೆ.

ಚಿರತೆಯು ಬೋನಿಗೆ‌ ಬಿದ್ದಿರುವ ಮಾಹಿತಿಯನ್ನು ರೈತರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆಯ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ಹರಡುತ್ತಿದ್ದಂತೆಯೇ, ವೀಕ್ಷಿಸುವುದಕ್ಕಾಗಿಯೇ ಗ್ರಾಮಸ್ಥರು ತಂಡೋಪ ತಂಡವಾಗಿ ಬಂದಿದ್ದರು.

ADVERTISEMENT

ಈ ಭಾಗದಲ್ಲಿ ಇನ್ನೂ ಹೆಚ್ಚಿನ ಚಿರತೆಗಳಿವೆ. ಹೀಗಾಗಿ, ಗ್ರಾಮದಲ್ಲಿ ಮತ್ತೊಂದು ಬೋನಿಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.