ಮೈಸೂರು: ಇಲ್ಲಿನ ತಿಲಕ್‌ನಗರದ ‘ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಪಾಠಶಾಲೆ’ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಬಾಲಕರಿಗೆ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯ ಕಲಿಕೆಗೆ (1ರಿಂದ 10ನೇ ತರಗತಿಯವರೆಗೆ) ಕಲಿಯಲು ಅವಕಾಶವಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಸಾಮಾನ್ಯ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವನ್ನೇ ಇಲ್ಲೂ ನೀಡಲಾಗುತ್ತದೆ. ವಿಶೇಷ ಮಕ್ಕಳಿಗೆ ಭಾಷಾ ಕಲಿಕೆಯಲ್ಲಿ ವಿನಾಯಿತಿ ಇದ್ದು, ಒಟ್ಟಾರೆ ಕನ್ನಡ ಭಾಷೆಯೊಂದಿಗೆ ಗಣಿತ ವಿಜ್ಞಾನ ಹಾಗೂ ಸಮಾಜವಿಜ್ಞಾನ ವಿಷಯವನ್ನು ಕಲಿಯಬೇಕು.
ಮೇ 29ರಂದು 2025-26ನೇ ಶೈಕ್ಷಣಿಕ ಸಾಲಿಗೆ 1ನೇ ತರಗತಿಗೆ 5 ವರ್ಷ 5 ತಿಂಗಳು ವಯಸ್ಸಿನಿಂದ 9 ವರ್ಷದೊಳಗಿನ ಬಾಲಕ, ಬಾಲಕಿಯರು ಹಾಗೂ ಅಂಗವಿಕಲತೆ ಕಾರಣದಿಂದ ಇದುವರೆಗೂ ಶಾಲೆಗೆ ದಾಖಲಾಗದವರಿಗೆ ಪ್ರವೇಶ ನೀಡಲಾಗುವುದು. ಇತರ ಶಿಕ್ಷಣ ಸಂಸ್ಥೆಗಳಲ್ಲಿರುವ ಬಾಲಕರು ಬಯಸಿದರೆ ದಾಖಲಿಸಿಕೊಳ್ಳಲಾಗುವುದು.
ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯಪುಸ್ತಕಗಳು ಹಾಗೂ ವೈದ್ಯಕೀಯ ಸೇವೆ ಒದಗಿಸಲಾಗುವುದು. ಸ್ಮಾರ್ಟ್ ಕ್ಲಾಸ್ ಸೌಲಭ್ಯ ಸೇರಿದಂತೆ ಎಲ್ಲವೂ ಉಚಿತ.
ಪೋಷಕರು ಅರ್ಜಿಯನ್ನು ಶಾಲೆಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ. 0821–2494104/ ಮೊ.ಸಂ. 94490 10499 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.