
ಮುಸುಕುದಾರಿಗಳ ಗುಂಪು
ನಂಜನಗೂಡು: ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಸೂರ್ಯೋದಯ ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಶಿಕ್ಷಕ ಜಯಪ್ರಕಾಶ್ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದ್ದು , ಗುರುವಾರ ಸೂರ್ಯೋದಯ ಬಡಾವಣೆಗೆ ಮನೆಗೆ ಹೊಸದಾಗಿ ಬಾಡಿಗೆಗೆ ಬಂದಿದ್ದರು ಎನ್ನಲಾಗಿದ್ದು, ಮೊದಲು ವಾಸವಿದ್ದ ಹಳೇ ಮನೆಯಿಂದ ನಗದು ಮತ್ತು ಚಿನ್ನಾಭರಣಗಳ ಸಮೇತ ಪೀಠೋಪಕರಣಗಳನ್ನ ಹೊಸಮನೆಗೆ ಶಿಫ್ಟ್ ಮಾಡಿದ್ದು, ಮರುದಿನ ಮನೆಗೆ ವಾಸಕ್ಕೆ ಬರಲು ನಿರ್ಧರಿಸಿ ಹಳೆಯ ಮನೆಯಲ್ಲಿ ರಾತ್ರಿ ಮಲಗಿದ್ದಾರೆ. ಬೆಳಿಗ್ಗೆ ಎದ್ದು ಹೊಸ ಮನೆಗೆ ತೆರಳಿದಾಗ ಬಾಗಿಲ ಬೀಗ ಮುರಿದು ಕಳವು ಮಾಡಿರುವುದು ಗೊತ್ತಾಗಿದೆ. ಇವರ ಪತ್ನಿಯೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ನಗದು ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳ್ಳರು ದೋಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರಕಾಸ್ತ್ರಗಳನ್ನು ಹಿಡಿದು ಇದೇ ಬಡಾವಣೆಯ ಮೂರ್ನಾಲ್ಕು ಮನೆಗಳ ಮುಂದೆ ದರೋಡೆಗೆ ಇದೇ ತಂಡ ಹೊಂಚು ಹಾಕಿರುವ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.