ADVERTISEMENT

ವರುಣಾ: ಹಿರಿಯ ವಿದ್ಯಾರ್ಥಿಗಳಿಂದ ನಗರ್ಲೆ ಸರ್ಕಾರಿ ಶಾಲೆ ದುರಸ್ತಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 5:49 IST
Last Updated 13 ಅಕ್ಟೋಬರ್ 2021, 5:49 IST
ವರುಣಾ ಸಮೀಪದ ನಗರ್ಲೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಯ ಹೆಂಚುಗಳನ್ನು ಸರಿಪಡಿಸಿದರು
ವರುಣಾ ಸಮೀಪದ ನಗರ್ಲೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಯ ಹೆಂಚುಗಳನ್ನು ಸರಿಪಡಿಸಿದರು   

ವರುಣಾ: ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ಶಿಥಿಲಾವಸ್ಥೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಹಿರಿಯ ವಿದ್ಯಾರ್ಥಿಗಳು ದುರಸ್ತಿಗೊಳಿಸಲು ಮುಂದಾಗಿದ್ದಾರೆ.

ಹಿರಿಯ ವಿದ್ಯಾರ್ಥಿಗಳು ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಂಡು ಶಾಲೆಯ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ, ಗ್ರಾಮದ ಎಲ್ಲಾ ಮುಖಂಡರು, ಸಂಘ ಸಂಸ್ಥೆ, ಶಾಲೆಯ ಶಿಕ್ಷಕರ ಮತ್ತು ದಾನಿಗಳ ಸಹಯೋಗದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿದ್ದಾರೆ.

ಶಾಲಾ ಕಟ್ಟಡ ಚಾವಣಿ ದುರಸ್ತಿ, ಕಾಂಪೌಂಡ್‌ಗೆ ನೂತನ ಗೇಟ್ ಅಳವಡಿಕೆ, ಧ್ವಜ ಸ್ಥಂಭ ನಿರ್ಮಾಣ, ಉದ್ಯಾನಕ್ಕೆ ಅಲಂಕಾರಿಕ ಕೆಲಸಗಳು, ಉದ್ಯಾನ ನಿರ್ಮಾಣಕ್ಕೆ ಸಿದ್ಧತೆ, ಆಟದ ಮೈದಾನ ಅಭಿವೃದ್ಧಿ, ಶಾಲೆಗೆ
ವಿನೂತನ ಮಾದರಿಯಲ್ಲಿ ಬಣ್ಣ ಹಾಕುವುದು ಹಾಗೂ ಶಾಲೆಯ ಮುಂಭಾಗದ ಸ್ವಚ್ಛತೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.

ADVERTISEMENT

‘ಶಾಲೆಯ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಕಾಮಗಾರಿ ಚುರುಕುಗೊಳ್ಳಲು ದಾನಿಗಳಿಂದ ನೆರವು ನಿರೀಕ್ಷಿಸುತ್ತಿದ್ದೇವೆ’ ಎಂದು ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.