ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ನಂಜನಗೂಡು: ತಾಲ್ಲೂಕಿನ ಅಡಕನಹಳ್ಳಿಹುಂಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಾದಪ್ಪ (64) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡರು.
‘ಜಮೀನು ವಿಚಾರಕ್ಕೆ ಸಂಬಂಧಿಸಿ ಕುರುಬ ಜನಾಂಗದ ಕೂಟ ಸೇರಿ ಗಡಿಪಾರು ಮಾಡುವ ಬೆದರಿಕೆ ಒಡ್ಡಿದ್ದೇ ಕಾರಣ’ ಎಂದು ಅವರ ಪತ್ನಿ ಸುಶೀಲಮ್ಮ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಜನಾಂಗದ ಯಜಮಾನರಾಗಿದ್ದ ಮಾದಪ್ಪನವರ ಸುಪರ್ದಿಯಲ್ಲಿ ಕೂಟಕ್ಕೆ ಸೇರಿದ ಪಾತ್ರೆ ಮತ್ತು ಇನ್ನಿತರ ವಸ್ತುಗಳಿದ್ದವು. ಅವರ ತಮ್ಮ ಮರಾಳು ಅಲಿಯಾಸ್ ಮರಿಗೌಡರಿಗೆ ಸೇರಿದ ಜಮೀನು ಕೂಡ ಕೂಟದ ಹಣದಿಂದ ಖರೀದಿಸಿದ್ದು, ಅದು ಕೂಡ ಕೂಟಕ್ಕೆ ಸೇರಿದ್ದು, ಎಲ್ಲವನ್ನೂ ವಾಪಸು ಕೊಡಬೇಕು ಎಂದು ಗ್ರಾಮದ ಕರಿಗೌಡ, ಕುಮಾರ, ಕೆಂಪನಂಜೇಗೌಡ, ಕುಂದಪ್ಪನ ಮಹದೇವ, ಮಹದೇವ, ಕೆಂಚೇಗೌಡ ಬೆದರಿಕೆ ಹಾಕಿ, ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದಾರೆ.
ಸಿಪಿಐ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.