ಮೈಸೂರು: ಇಲ್ಲಿನ ಸಿದ್ಧಾರ್ಥನಗರದ ಜಿಎಸ್ಎಸ್‌ಎಸ್ ಬಂಟ್ವಾಳ ಮಾಧವ ಶೆಣೈ ಪ್ರೌಢಶಾಲೆಯು 2024–25ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96.15 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 78 ವಿದ್ಯಾರ್ಥಿಗಳಲ್ಲಿ 27 ಅತ್ಯುನ್ನತ ಶ್ರೇಣಿ, 43 ಪ್ರಥಮ ದರ್ಜೆ ಹಾಗೂ 5 ದ್ವಿತೀಯ ದರ್ಜೆ ಫಲಿತಾಂಶ ದಾಖಲಿಸಿದ್ದಾರೆ.
ಎಂ.ಯಶಸ್ವಿನಿ (ಶೇ 99.5), ಆರ್.ಅಮೂಲ್ಯ (ಶೇ 97.44), ಜಿ.ವರ್ಷಿಣಿ (ಶೇ 97.12), ನಿಧಿ ಡಿ.ಭಾರದ್ವಾಜ್ (ಶೇ 96.32), ಪ್ರಮೀಳಾ (ಶೇ 95.3), ಎಂ.ಲೇಖನಾ (ಶೇ 95.04) ಹಾಗೂ ಸಂಜನಾ ರಾಜ್ (ಶೇ 95.04) ಅಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.