ADVERTISEMENT

‘ಮೊದಲೆರಡು ಸ್ಥಾನಕ್ಕೆ ಫಲಿತಾಂಶ ಹೆಚ್ಚಿಸಿ’

₹2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:13 IST
Last Updated 13 ಜೂನ್ 2025, 16:13 IST
ಹಂಪಾಪುರ ಸಮೀಪದ ಹೊಮ್ಮರಗಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗಳನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟನೆ ಮಾಡಿದರು
ಹಂಪಾಪುರ ಸಮೀಪದ ಹೊಮ್ಮರಗಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗಳನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟನೆ ಮಾಡಿದರು   

ಹಂಪಾಪುರ: 'ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದರೂ ತಾಲ್ಲೂಕು ಈ ಬಾರಿ ಜಿಲ್ಲಾ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆದಿರುವುದು ತೀವ್ರ ನೋವನ್ನುಂಟು ಮಾಡಿದೆ. ಮುಂದಿನ ಬಾರಿ ಫಲಿತಾಂಶದಲ್ಲಿ ಮೊದಲೆರಡು ಸ್ಥಾನಕ್ಕೆ ಜಿಗಿಯಬೇಕು ಎಂದು ಎಂದು ಶಾಸಕ ಅನಿಲ್ ಚಿಕ್ಕಮಾದು ಶಿಕ್ಷಕರಿಗೆ ತಿಳಿಸಿದರು.

ಮ್ಮರಗಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ₹ 1 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ, ₹ 60 ಲಕ್ಷ ವೆಚ್ಚದ ನಾಲ್ಕು ಕೊಠಡಿಗಳ ಲೋಕಾರ್ಪಣೆ, ಮೊದಲ ಅಂತಸ್ತಿಗೆ ₹ 4.5 ಲಕ್ಷ ವೆಚ್ಚದ ಮೆಟ್ಟಿಲು ನಿರ್ಮಾಣ, ಪ್ರೌಢಶಾಲೆಯ ₹ 30 ಲಕ್ಷ ವೆಚ್ಚದ 2 ಕಟ್ಟಡ ನಿರ್ಮಾಣಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ₹ 50 ಲಕ್ಷ ವೆಚ್ಚದ ಐದು ಕೊಠಡಿಗಳ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಶಾಸಕನಾಗಿ ಏಳು ವರ್ಷದಿಂದ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಕೆಲವು ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದ್ದೇನೆ. ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಎಂಟು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭ ಮಾಡಲಾಗಿದ್ದು ಪೋಷಕರಿಂದ ಉತ್ತಮ ಸ್ಪಂದನೆ ದೊರತಿದೆ. ತಾಲ್ಲೂಕಿನಲ್ಲಿ ₹170 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ ಹಾಗೂ ಕಟ್ಟಡಗಳ ಲೋಕಾರ್ಪಣೆಯನ್ನು ಮಾಡಿಸಲಾಗಿದ್ದು, ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಾಗುತ್ತಿದೆ’ ಎಂದರು. ಹೊಮ್ಮರಗಳ್ಳಿ ಮಿನಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಪ್ರಾಂಶುಪಾಲರಾದ ಇಂದ್ರಾಣಿ ಮಾತನಾಡಿ, 'ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ನಮ್ಮ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತಾ ಬಂದಿದೆ,  ಫಲಿತಾಂಶವೂ  ಸುಧಾರಿಸುತ್ತಿದೆ ' ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಮ್ಮ, ಉಪಾಧ್ಯಕ್ಷ ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು, ಬಸಪ್ಪ ಕೂಸಪ್ಪ ಟ್ರಸ್ಟ್  ಅಧ್ಯಕ್ಷ ನವೀನ್ ಕುಮಾರ್, ಉಪ ಪ್ರಾಂಶುಪಾಲ ಧರ್ಮಪ್ಪ, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ಪುರದಕಟ್ಟೆ ಬಸವರಾಜು, ಜಿನ್ಮಹಳ್ಳಿ ರಾಜನಾಯಕ, ವನಸಿರಿ ಶಂಕರ್, ಅಲಮೇಲಮ್ಮ, ಮುರಳಿ, ಮರಿದೇವಯ್ಯ, ಶಿವರಾಜು, ಶಿವಪ್ಪ ಕೋಟೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯರಾಮ್, ಗೋವಿಂದರಾಜು, ಗ್ರಾಮಸ್ಥರಾದ ರವಿ, ನಾಗೇಶ್, ಶಿಕ್ಷಕರಾದ ಮಹದೇವಮ್ಮ, ಶ್ರೀನಿವಾಸ್, ರವಿ, ಗುರುಮೂರ್ತಿ, ವಸಂತಕುಮಾರ್, ಸಾವಿತ್ರಮ್ಮ, ರಾಜಮ್ಮ, ಆಶಾ, ಅಜಾರ್, ಕೃಷ್ಣಮೂರ್ತಿ, ಶಿವಶಂಕರ್, ಗಿರಿ, ಅಶೋಕ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.