ADVERTISEMENT

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಆಯೋಜನೆ: ಕರಕುಶಲ ಮೇಳ; ನಾಳೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 5:34 IST
Last Updated 6 ಡಿಸೆಂಬರ್ 2025, 5:34 IST
ಲೋಗೊ
ಲೋಗೊ   

ಮೈಸೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ‘ದಿ ಇಂಡಿಯನ್ ಆರ್ಟಿಸನ್ಸ್ ಹಾತ್‌’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಇನ್ನೆರಡು ದಿನಗಳಷ್ಟೆ ತೆರೆದಿರಲಿದೆ. ಡಿ.7ರವರಗೆ ನಡೆಯಲಿದೆ.

ನಗರದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಆಯೋಜಿಸಿರುವ ಪ್ರದರ್ಶನದಲ್ಲಿ ದೇಶದ ವಿವಿಧೆಡೆಯಿಂದ ಬಂದಿರುವ ಕರಕುಶಲಕರ್ಮಿಗಳು ತಯಾರಿಸಿದ ಪಾರಂಪರಿಕ ಕಲಾ ವಸ್ತುಗಳು ಜನರನ್ನು ಸೆಳೆಯುತ್ತಿವೆ.ಬಹುವೈವಿಧ್ಯದ ಕುಸುರಿಕಲೆಗಳ ಪರಿಕರಗಳು, ದೇಸಿ
ಶೈಲಿಯಲ್ಲಿ ಮನೆಯನ್ನು ಅಲಂಕರಿಸಬಹುದಾದ ಅಗತ್ಯ ವಸ್ತುಗಳು,
ಸೌಂದರ್ಯವರ್ಧಕಗಳು, ಆಹಾರೋತ್ಪನ್ನಗಳು, ವಿವಿಧ ವಿನ್ಯಾಸದ ಉಡುಪುಗಳು, ಪಿಂಗಾಣಿ ಪಾತ್ರೆಗಳು, ಜಂಬೆ, ಲೋಹದಿಂದ ತಯಾರಿಸಿದ ಸಂಗೀತ ಪರಿಕರಗಳು ಪ್ರದರ್ಶನದ ಹೈಲೈಟ್ಸ್‌ ಆಗಿವೆ.

ಅಲಂಕಾರಿಕ ವಸ್ತುಗಳು, ಪರಿಕರಗಳಲ್ಲಿ ಮೂಡಿದ ಸಾಂಪ್ರದಾಯಿಕ ಕುಸುರಿ ಕಲೆಯನ್ನು ಕಂಡು ಗ್ರಾಹಕರು ಖುಷಿಯಿಂದ ಖರೀದಿಸುತ್ತಿದ್ದಾರೆ. ₹ 10ರಿಂದ
₹ 2.5 ಲಕ್ಷ ಮೌಲ್ಯದ ಕಲಾಕೃತಿಗಳು ಮೇಳದಲ್ಲಿವೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.