ADVERTISEMENT

ಹೃದ್ರೋಗ ಹೆಚ್ಚಳ: ವೈದ್ಯರಿಗೂ ಒತ್ತಡ; ಡಾ.ಕೆ.ಎಸ್.ರವೀಂದ್ರನಾಥ್

ಜೀವನಶೈಲಿ ಬದಲಿಸಿಕೊಳ್ಳಿ: ಡಾ. ಕೆ.ಎಸ್.ರವೀಂದ್ರನಾಥ್ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 3:21 IST
Last Updated 15 ಜುಲೈ 2025, 3:21 IST
<div class="paragraphs"><p>ಮೈಸೂರಿನ&nbsp;ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ&nbsp;‘ಕಾರ್ಡಿಯೊ ಯೋಗ ಸಮ್ಮೇಳನ’ವನ್ನು&nbsp;ಕೇಂದ್ರ ಯೋಗ ಮತ್ತು ನ್ಯಾಚುರೋಪಥಿ ಸಂಶೋಧನಾ ಪರಿಷತ್‌ನ (ಸಿಸಿಆರ್‌ವೈಎನ್‌) ನಿರ್ದೇಶಕ ಡಾ.ರಾಘವೇಂದ್ರ ರಾವ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್ ಉದ್ಘಾಟಿಸಿದರು. </p></div>

ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಕಾರ್ಡಿಯೊ ಯೋಗ ಸಮ್ಮೇಳನ’ವನ್ನು ಕೇಂದ್ರ ಯೋಗ ಮತ್ತು ನ್ಯಾಚುರೋಪಥಿ ಸಂಶೋಧನಾ ಪರಿಷತ್‌ನ (ಸಿಸಿಆರ್‌ವೈಎನ್‌) ನಿರ್ದೇಶಕ ಡಾ.ರಾಘವೇಂದ್ರ ರಾವ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್ ಉದ್ಘಾಟಿಸಿದರು.

   

ಮೈಸೂರು: ‘ಹೃದಯಾಘಾತ ಪ್ರಕರಣಗಳು, ಹೃದ್ರೋಗಿಗಳ ಸಂಖ್ಯೆಯು ಹೆಚ್ಚುತ್ತಿದ್ದು, ವೈದ್ಯರಲ್ಲೂ ಒತ್ತಡ ಸೃಷ್ಟಿಯಾಗಿದೆ. ಆರೋಗ್ಯಕರ ಜೀವನಶೈಲಿ ಎಲ್ಲರದ್ದಾಗಬೇಕಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಪ್ರತಿಪಾದಿಸಿದರು. 

ಇಲ್ಲಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರವು ಸೋಮವಾರ ಆಯೋಜಿಸಿದ್ದ ‘ಕಾರ್ಡಿಯೊ ಯೋಗ ಸಮ್ಮೇಳನ’ದಲ್ಲಿ ವರ್ಚವಲ್‌ ಮೂಲಕ ಮಾತನಾಡಿದ ಅವರು, ‘ಮಧುಮೇಹ, ಬೊಜ್ಜು, ಮಾನಸಿಕ ಒತ್ತಡ, ಕೊಬ್ಬು ಹೆಚ್ಚುತ್ತಿರುವುದೇ ಹೃದ್ರೋಗ ಪ್ರಕರಣಗಳು ಹೆಚ್ಚಾಗಲು ಕಾರಣ. ಜೊತೆಗೆ ವಾಯುಮಾಲಿನ್ಯವೂ ಸೇರಿಕೊಂಡಿದೆ’ ಎಂದರು. 

ADVERTISEMENT

‘ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಸದೃಢವಾಗಿದ್ದರೆ ಮಾತ್ರ ವ್ಯಕ್ತಿಯು ಆರೋಗ್ಯವಾಗಿರಲು ಸಾಧ್ಯ. ಜಾಗತಿಕವಾಗಿ 30 ಕೋಟಿ ಜನರು ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ದೇಹ ಮತ್ತು ಮನಸ್ಸನ್ನು ಒಂದಾಗಿಸುವ ಕಲೆಯಾಗಿದ್ದು, ಶತಮಾನಗಳ ಇತಿಹಾಸ ಇದಕ್ಕಿದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ’ ಎಂದು ಹೇಳಿದರು.

‘ಮಧುಮೇಹ, ಹೃದ್ರೋಗ, ರಕ್ತದೊತ್ತಡ ಅನುವಂಶೀಯವಾದರೂ ದಶಕಗಳಿಂದ ಬದಲಾದ ಜೀವನಶೈಲಿಯಿಂದ ಹೊಸಬರಿಗೂ ಬರುತ್ತಿದೆ. ಹೊಟ್ಟೆ ಹಾಗೂ ಸೊಂಟದ ಸುತ್ತ ಶೇಖರವಾಗುವ ಕೊಬ್ಬು ಅಪಾಯಕಾರಿ. ಯಕೃತ್ತು, ಕರುಳು, ಗುಲ್ಮ, ಮೇದೋಜೀರಕ ಗ್ರಂಥಿಗಳ ಸುತ್ತಲೂ ಆವರಿಸಿಕೊಂಡು ಅವುಗಳ ಕ್ಷಮತೆ ಕುಂಠಿತಗೊಳಿಸುತ್ತದೆ’ ಎಂದು ವಿವರಿಸಿದರು. 

‘ಇನ್ಸುಲಿನ್‌ನ ಉತ್ಪತ್ತಿ ಇಳಿಮುಖವಾದರೆ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಂಗಾಂಶಗಳಲ್ಲಿ ಉರಿಯೂತ ಉಂಟಾಗುತ್ತದೆ. ಅದನ್ನು ‘ಮೆಟಬಾಲಿಕ್‌ ಸಿಂಡ್ರೋಮ್‌’ ಎನ್ನುತ್ತೇವೆ. ಈ ಎಲ್ಲ ಅಂಶಗಳು ಹೃದಯ ಮತ್ತು ರಕ್ತನಾಳಗಳ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ’ ಎಂದರು.     

ನಿವೃತ್ತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ‘ದೇಶದ 7.7 ಕೋಟಿ ಜನರು ಮಧುಮೇಹ ಪೀಡಿತರಾಗಿದ್ದಾರೆ. ಆಹಾರ ಶೈಲಿ ಬದಲಿಸಿಕೊಳ್ಳಬೇಕಿದೆ’ ಎಂದರು. 

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಎಂ.ಎ.ಶೇಖರ್, ಜಯದೇವ ಹೃದ್ರೋಗ ಸಂಸ್ಥೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಕೆ.ಎಸ್.ಸದಾನಂದ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಎಲ್‌.ಎನ್‌.ಶೆಣೈ, ದಿನೇಶ್‌, ಸಿಎಆರ್‌ಐನ ಸಂಶೋಧನಾ ಅಧಿಕಾರಿ ಡಾ.ಶುಭಶ್ರೀ, ಡಾ.ತೇಜಸ್ವಿನಿ ದೀಪಕ್, ಆಂಥೋಣಿ ಪೌಲ್‌ರಾಜ್, ರಾಜೇಶ್‌ ಪಾಲ್ಗೊಂಡಿದ್ದರು. 

ದೇಶದ 7.7 ಕೋಟಿ ಜನ ಮಧುಮೇಹ ಪೀಡಿತರು ಹೊಟ್ಟೆ, ಸೊಂಟದ ಸುತ್ತ ಶೇಖರವಾದ ಕೊಬ್ಬು ಅಪಾಯಕಾರಿ ಇನ್ಸುಲಿನ್‌ ಉತ್ಪತ್ತಿ ಇಳಿಮುಖ; ಹಲವು ಸಮಸ್ಯೆಗಳಿಗೆ ದಾರಿ 

ಸಮಸ್ಯೆ ಎದುರಾದಾಗ ಖಿನ್ನತೆಗೆ ಒಳಗಾಗಬಾರದು. ಅದರಿಂದ ಆಚೆ ಬರಲು ವ್ಯಾಯಾಮ ಯೋಗ ಮಾಡಬೇಕು. ದೇಹ ಮತ್ತು ಮನಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು
ಡಾ.ಕೆ.ಎಸ್.ರವೀಂದ್ರನಾಥ್ ನಿರ್ದೇಶಕ ಜಯದೇವ ಹೃದ್ರೋಗ ಸಂಸ್ಥೆ

‘5.42 ಕೋಟಿ ಮಂದಿ ಯೋಗಾಭ್ಯಾಸ’ ‘ದೇಶದಲ್ಲಿ ಶೇ 11.38ರಷ್ಟು ಜನರು ಯೋಗಾಭ್ಯಾಸದ ಅರಿವಿದ್ದು ನಿತ್ಯ 5.42 ಕೋಟಿ ಜನರು ಯೋಗ ಮಾಡುತ್ತಿದ್ದಾರೆ’ ಎಂದು ಕೇಂದ್ರ ಯೋಗ ಮತ್ತು ನ್ಯಾಚುರೋಪಥಿ ಸಂಶೋಧನಾ ಪರಿಷತ್‌ನ (ಸಿಸಿಆರ್‌ವೈಎನ್‌) ನಿರ್ದೇಶಕ ಡಾ.ರಾಘವೇಂದ್ರ ರಾವ್ ತಿಳಿಸಿದರು.  ‘ಕಳೆದ ತಿಂಗಳು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಷತ್ ಸಮೀಕ್ಷೆ ಕೈಗೊಂಡಿತ್ತು. ಜನರನ್ನು ರೋಗಗಳು ಹೆಚ್ಚು ಕಾಡುತ್ತಿವೆ. ಹೀಗಾಗಿ ಅವರಲ್ಲಿ ಯೋಗ ಜಾಗೃತಿ ಮೂಡುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.