ADVERTISEMENT

ಕೇರಳ, ನಾಗರಹೊಳೆಯಲ್ಲಿ ಭಾರಿ ಮಳೆ: ಕಬಿನಿ ಜಲಾಶಯದ ಒಳ ಹರಿವು ಇನ್ನಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಮೇ 2022, 7:04 IST
Last Updated 19 ಮೇ 2022, 7:04 IST
ಎಚ್.ಡಿ.ಕೋಟೆ ತಾಲ್ಲೂಕಿನ ಹೆಬ್ಬಳ್ಳ ಜಲಾಶಯ
ಎಚ್.ಡಿ.ಕೋಟೆ ತಾಲ್ಲೂಕಿನ ಹೆಬ್ಬಳ್ಳ ಜಲಾಶಯ   

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೇರಳದ ವಯನಾಡು ಸುತ್ತಮುತ್ತ ಭಾರಿ ಮಳೆಯಾಗುತ್ತಿರುವುದರಿಂದ, ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.
ಸದ್ಯ ಒಳ ಹರಿವು 3,424 ಕ್ಯುಸೆಕ್ ಗೆ ತಲುಪಿದೆ. ಕಳೆದ ವರ್ಷ ಇದೆ ಸಮಯದಲ್ಲಿ 88 ಕ್ಯುಸೆಕ್ ಮಾತ್ರವೇ ಇತ್ತು. ಸಾಮಾನ್ಯವಾಗಿ ಇಷ್ಟೊಂದು ಪ್ರಮಾಣದಲ್ಲಿ ನೀರು ಮುಂಗಾರಿನ ಸಂದರ್ಭದಲ್ಲಿ ಜಲಾಶಯಕ್ಕೆ ಬರುತ್ತಿತ್ತು. ಈಗ ಮುಂಗಾರು ಪ್ರವೇಶಕ್ಕೂ ಮುನ್ನವೇ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಹೆಬ್ಬಳಕ್ಕೆ ಹೆಚ್ಚು ನೀರು:ನಾಗರಹೊಳೆಯಿಂದ ಹೆಬ್ಬಳ್ಳ ಜಲಾಶಯಕ್ಕೆ 2 ಗಂಟೆ ಅವಧಿಯಲ್ಲಿ 8 ಅಡಿ ನೀರು ಹರಿದುಬಂದಿದೆ. ಈ ವೇಗದಲ್ಲಿ ಜಲಾಶಯ ಭರ್ತಿಯಾಗಿರುವುದು ಇದೇ ಮೊದಲು ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೌಸಿಯ ತಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಗುಲದ ಕಾಂಪೌಂಡ್ ಕುಸಿತ: ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಪುರಾತನ ದೇಶೇಶ್ವರ ದೇವಾಲಯದ ಕಾಂಪೌಂಡ್ ಕುಸಿದಿದೆ.

ADVERTISEMENT

ಒಡೆದ ನಾಲೆ ಏರಿ: ಗದ್ದೆಗೆ ನುಗ್ಗಿದ ನೀರು

ಮಂಚೇಗೌಡ ನಾಲೆ ಏರಿ ಒಡೆದು ಸಾಲಿಗ್ರಾಮ ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.