ಬೆಟ್ಟದಪುರ: ಸಮೀಪದ ಗೊರಹಳ್ಳಿ ಗ್ರಾಮದ ರೈತ ಲೋಕೇಶ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುರುವಾರ ಬೆಳಿಗ್ಗೆ ಹಗೆವು (ಗುಂಡಿ) ಪತ್ತೆಯಾಗಿದೆ.
ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುವ ಸಂದರ್ಭದಲ್ಲಿ ಗುಂಡಿಯೊಂದು ಕಂಡು ಬಂದಿದೆ. ಬಳಿಕ ಅದನ್ನು ಗಮನಿಸಿದಾಗ ಸುಮಾರು 8ರಿಂದ 10 ಅಡಿ ಅಳವಿದ್ದು, ಒಳಗಡೆ ವೃತ್ತಾಕಾರದಲ್ಲಿ ಅಗಲವಾಗಿದೆ. ಪ್ರಾಚೀನಾ ಕಾಲದಲ್ಲಿ ರೈತರು ತಾವು ಬೆಳೆದಂತಹ ಬೆಳೆಗಳ, ದವಸ ಧಾನ್ಯಗಳ ಸಂರಕ್ಷಣೆಗಾಗಿ ಹಾಗೂ ದಾಳಿ ಕೋರರು ಬಂದಾಗ ಬಚ್ಚಿಟ್ಟುಕೊಳ್ಳುವುದಕ್ಕಾಗಿ ತಮ್ಮ ಜಮೀನಿನ ಭೂಮಿಯಲ್ಲಿ ಕಣಜ ರೂಪದಲ್ಲಿ ಹಗೆವು ಅನ್ನು ನಿರ್ಮಿಸುತ್ತಿದ್ದರು ಎನ್ನಲಾಗಿದೆ.
ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಬೆಟ್ಟದಪುರ ಸೇರಿದಂತೆ ಸಮೀಪದ ಸುರಗಳ್ಳಿ ಗ್ರಾಮದಲ್ಲಿಯೂ ಕೂಡ ಇದೇ ರೀತಿ ದೊಡ್ಡದಾದ ಹಗೆವು ಜಮೀನಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.