ಹುಣಸೂರು: ದೇವರಾಜ ಅರಸು ಆಸ್ಪತ್ರೆ ಹೆಚ್ಚುವರಿ ಅನುದಾನ ₹ 9.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, 8 ತಿಂಗಳಲ್ಲಿ ಜನರಿಗೆ ಆಸ್ಪತ್ರೆ ಲಭ್ಯವಾಗಲಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಯ ಆಸ್ಪತ್ರೆ ಕಾಮಗಾರಿ ಗೆ ಶುಕ್ರವಾರ ಪರಿಶೀಲಿಸಿ ಅವರು ಮಾದ್ಯಮದೊಂದಿಗೆ ಮಾತನಾಡಿದರು. ಕೋಲ್ಡ್ ಸ್ಟೋರೇಜ್ ಶವಾಗಾರ, ತ್ಯಾಜ್ಯ ನೀರು ಸಂಗ್ರಹ ತೊಟ್ಟಿ, ಇಪಿಟಿ, 4 ಲಿಫ್ಟ್, ಅಗ್ನಿಶಾಮಕ ಘಟಕ, ಸಿ.ಸಿ. ಟಿವಿ ಕ್ಯಾಮೆರಾ, ರಸ್ತೆ, ಕಾಪೌಂಡ್, ಇಂಟರ್ನೆಟ್ ಸಂಪರ್ಕ ಲಭಣ್ಯವಾಗಲಿದೆ ಎಂದರು.
ವೈದ್ಯರ ಕೊರತೆ: ನೂರು ಹಾಸಿಗೆಯ ಆಸ್ಪತ್ರೆಗೆ ವೈದ್ಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಲಿದೆ. ಆರೋಗ್ಯ ಸಚಿವರು ಅಗತ್ಯ ವೈದ್ಯರು, ವಿವಿಧ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ. ಹಾಲಿ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿ ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆ ವಿಭಾಗಕ್ಕೆ ಸೀಮಿತಗೊಳಿಸುವ ಆಲೋಚನೆ ಇದೆ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್, ಇಇ ಜಗದೀಶ್,ಗುರುಪ್ರಸಾದ್, ನಾಗರಾಜ್, ನಗರಸಭೆ ಆಯುಕ್ತೆ ಮಾನಸ, ಜೆಡಿಎಸ್ ಮುಖಂಡ ಸತೀಶ್ ಪಾಪಣ್ಣ, ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಷಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.