ADVERTISEMENT

ಹುಣಸೂರು | ಘನತ್ಯಾಜ್ಯ ನಿರ್ವಹಣೆ ವೈಫಲ್ಯ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:34 IST
Last Updated 10 ಮೇ 2025, 15:34 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಚರಂಡಿಯಲ್ಲಿ ತುಂಬಿರುವ ಘನತ್ಯಾಜ್ಯವನ್ನು ಸ್ಥಳಿಯ ನಿವಾಸಿಗರು ಸ್ವಚ್ಚಗೊಳಿಸುತ್ತಿರುವ ಚಿತ್ರ.
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಚರಂಡಿಯಲ್ಲಿ ತುಂಬಿರುವ ಘನತ್ಯಾಜ್ಯವನ್ನು ಸ್ಥಳಿಯ ನಿವಾಸಿಗರು ಸ್ವಚ್ಚಗೊಳಿಸುತ್ತಿರುವ ಚಿತ್ರ.   

ಹುಣಸೂರು: ಕಟ್ಟೆಮಳಲವಾಡಿ ಗ್ರಾಮದಲ್ಲಿ ಸ್ವಚ್ಛ ಭಾರತ್ ಅಭಿಯಾನ ಸಂಪೂರ್ಣ ವಿಫಲವಾಗಿದ್ದು, ಗ್ರಾಮದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಗ್ರಾಮದ ಉಪ್ಪಾರ ಬೀದಿ, ನಂದಿ ವೃತ್ತ, ಲಕ್ಷ್ಮಣತೀರ್ಥ ನದಿಗೆ ಹೋಗುವ ರಸ್ತೆಗಳಲ್ಲಿ ಘನತ್ಯಾಜ್ಯ ಅಲ್ಲಲ್ಲಿ ಬಿದ್ದಿದ್ದು, ಪ್ಲಾಸ್ಟಿಕ್ ತ್ಯಾಜ್ಯ ತೆರೆದ ಚರಂಡಿ ಆಕ್ರಮಿಸಿಕೊಂಡಿದೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ಹರಿದು ಹೋಗಲು ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಹಾವಳಿ ಹೆಚ್ಚಿದೆ ಎಂದು ಗ್ರಾಮದ ನಿವಾಸಿ ದಾಸಯ್ಯ, ರಾಜ ಮತ್ತು ಡಿ.ಮಹೇಶ್ ಆರೋಪಿಸಿದರು.

ಸ್ಫೂರ್ತಿ ಸೇವಾ ಟ್ರಸ್ಟ್ ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಿಡಿಯಮ್ಮ ಜಾತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಪಂಚಾಯಿತಿ ವತಿಯಿಂದ ₹ 4 ಲಕ್ಷ ಅನುದಾನ ಕಾದಿಡಲಾಗಿತ್ತು. ಜಾತ್ರೆ ಮುಗಿದಿದ್ದರೂ ಪಂಚಾಯಿತಿ ಸ್ವಚ್ಚತೆಗೆ ಚಾಲನೆ ನೀಡಿಲ್ಲ. ಗ್ರಾಮದಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯ ಹರಡಿಕೊಂಡಿದೆ.  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು.

ADVERTISEMENT

ಸ್ವಚ್ಚ ಭಾರತ್ ಅಭಿಯಾನದಲ್ಲಿ ಘನತ್ಯಾಜ್ಯ ನಿರ್ವಹಣೆ ಕೊಠಡಿ ನಿರ್ಮಿಸಿದ್ದರೂ ಬಳಕೆ ಆಗುತ್ತಿಲ್ಲ. ತ್ಯಾಜ್ಯ ಸಂಗ್ರಹಕ್ಕೆ ಖರೀದಿಸಿದ ವಾಹನ ರಿಪೇರಿಗೆ ಕಳುಹಿಸಿದೆ ಎಂದು ಉತ್ತರಿಸುವ ಅಧಿಕಾರಿಗಳು ಗ್ರಾಮ ಸ್ವಚ್ಛತೆ ನಿರ್ವಹಣೆಗೆ ಆಧ್ಯತೆ ನೀಡದಿರುವುದು ವಿಪರ್ಯಾಸ ಎಂದು ಸ್ಪೂರ್ತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.