ADVERTISEMENT

ಹುಣಸೂರು: ಕಾಲೇಜು ವಿದ್ಯಾರ್ಥಿನಿ ನದಿಗೆ ಹಾರಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 3:17 IST
Last Updated 19 ಸೆಪ್ಟೆಂಬರ್ 2025, 3:17 IST
ಹುಣಸೂರು ತಾಲ್ಲೂಕಿನ ಹರವೆ ಗ್ರಾಮದ ನಿವಾಸಿ ದೀಪಿಕ (18) ಲಕ್ಷ್ಮಣತೀರ್ಥ ನದಿಗೆ ಹಾರಿ ಗುರುವಾರ ಆತ್ಮಹತ್ಯೆ .
ಹುಣಸೂರು ತಾಲ್ಲೂಕಿನ ಹರವೆ ಗ್ರಾಮದ ನಿವಾಸಿ ದೀಪಿಕ (18) ಲಕ್ಷ್ಮಣತೀರ್ಥ ನದಿಗೆ ಹಾರಿ ಗುರುವಾರ ಆತ್ಮಹತ್ಯೆ .   

ಹುಣಸೂರು: ತಾಲ್ಲೂಕಿನ ಹರವೆ ಗ್ರಾಮದ ಯುವತಿ ನಗರದ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗ್ರಾಮದ ನಿವಾಸಿ ನಂಜುಂಡಸ್ವಾಮಿ ಅವರ ಪುತ್ರಿ ದೀಪಿಕಾ (18) ಮೈಸೂರಿನ ಜಯಲಕ್ಷ್ಮಿಪುರಂ ಬಡಾವಣೆಯ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಸಹಪಾಠಿಯೂ ಆದ ತಾಲ್ಲೂಕಿನ ಕುಪ್ಪೆ ಕೊಳಗಟ್ಟ ಗ್ರಾಮದ ನಿವಾಸಿ ಶರತ್‌ ಮತ್ತು ದೀಪಿಕಾ ಇಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಮುರಿದು ಬಿದ್ದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ನೋಟ್‌ ಪುಸ್ತಕದಲ್ಲಿ ಡೆತ್‌ ನೋಟ್‌ ಬರೆದಿದ್ದು ತನಿಖೆ ನಡೆದಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಕಶ್ಯಪ್‌ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.