ಪಿರಿಯಾಪಟ್ಟಣ ತಾಲ್ಲೂಕು ಗ್ಯಾರಂಟಿ ಸಮಿತಿ ಸಭೆಯಲ್ಲಿ ಪಡಿತರ ಚೀಟಿ ಜಾಗೃತಿ ಫಲಕಗಳನ್ನು ಅಧ್ಯಕ್ಷ ಅಧ್ಯಕ್ಷ ನಿತಿನ್ ವೆಂಕಟೇಶ್ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು.
ಪಿರಿಯಾಪಟ್ಟಣ: ಜನರಿಗೆ ಗ್ಯಾರಂಟಿ ಯೋಜನೆ ಸೌಲಭ್ಯಗಳನ್ನು ತಲುಪಿಸಲು ವಿಳಂಬ ನೀತಿ ಅನುಸರಿಸಬಾರದು ಎಂದು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನಿತಿನ್ ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾತಯಿತಿ ಕಚೇರಿಯಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಘಟಕದ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ತಾಲೂಕಿನಲ್ಲಿ 2000 ಹೊಸ ನೋಂದಣಿ ಆಗಿದೆ. 1,800 ಮಂದಿಗೆ ಯೋಜನೆ ತಲುಪಿಲ್ಲ, ಈ ಸಮಸ್ಯೆಯನ್ನು ಅಧಿಕಾರಿಗಳು ಮುಂದಿನ ಸಭೆಯೊಳಗೆ ಬಗೆಹರಿಸಬೇಕು. ಯುವ ನಿಧಿಯ 931 ಫಲಾನುಭವಿಗಳಲ್ಲಿ 700 ಮಂದಿಗೆ ಹಣ ಸಂದಾಯವಾಗಿದೆ. ಉಳಿದವರು ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. 28 ಹೊಸ ಬಸ್‌ಗಳು ಇಲ್ಲಿಯ ಡಿಪೋಗೆ ಬಂದಿವೆ. ಶಕ್ತಿ ಯೋಜನೆಯಲ್ಲಿ ಪ್ರತಿನಿತ್ಯ 22 ಸಾವಿರ ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ಚಾಲಕರ ಕೊರತೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ, ಆರ್ ಐ ಮಂಜುನಾಥ್ ಗ್ಯಾರಂಟಿ ಅನುಷ್ಠಾನದ ಸದಸ್ಯರಾದ ನಿರೂಪ, ವಿದ್ಯಾಶ್ರೀ, ಕೃಷ್ಣೇಗೌಡ, ಈರೇಗೌಡ, ರಘು, ಮಹಾದೇವ, ಮಹದೇವ, ಕುಮಾರ, ಧನರಾಜ್, ಅಸ್ಲಾಂ ಪಾಷ, ವಿಜಿ, ಈರೇಗೌಡ ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ದರ್ಶನ್ ರಾಮಚಂದ್, ವಿಶ್ವನಾಥ್, ಕೆಇಬಿ ಎಂಜಿನಿಯರ್ ಮನೋಜ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.