ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಬಸ್ ತಂಗುದಾಣಗಳನ್ನು ಶಾಸಕ ಟಿ.ಎಸ್.ಶ್ರೀವತ್ಸ ಭಾನುವಾರ ಉದ್ಘಾಟಿಸಿದರು.
‘ಕ್ಷೇತ್ರದಲ್ಲಿ ₹1.20 ಕೋಟಿ ವೆಚ್ಚದಲ್ಲಿ 10 ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಜೆಎಲ್‌ಬಿ ರಸ್ತೆ, ಸಿದ್ದಪ್ಪ ವೃತ್ತ, ಹಾರ್ಡಿಂಜ್ ವೃತ್ತ, ಶಾಂತಿ ಸಾಗರ್ ಮುಂತಾದ ಕಡೆಗಳಲ್ಲಿ ಉದ್ಘಾಟನೆಗೊಂಡಿವೆ. ಜನರು ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಶ್ರೀವತ್ಸ ಮನವಿ ಮಾಡಿದರು.
‘ನಿಲ್ದಾಣಕ್ಕೆ ಸಮರ್ಪಕ ವಿದ್ಯುತ್ ಸಂಪರ್ಕ ಇರಬೇಕು. ಭಿತ್ತಿಪತ್ರ ಅಂಟಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾರಿಗೆ ಇಲಾಖೆಯಿಂದ ದಿನನಿತ್ಯ ಓಡಾಡುವ ಬಸ್‌ಗಳ ವೇಳಾಪಟ್ಟಿಯನ್ನು ಅಳವಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖಂಡರಾದ ಶಿವಕುಮಾರ್, ಸೌಮ್ಯ ಉಮೇಶ್, ರಮೇಶ್, ಜೋಗಿ ಮಂಜು, ಉಮೇಶ್, ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್, ಪ್ರದೀಪ್, ಜಯರಾಮ್, ಅನ್ನಪೂರ್ಣಮ್ಮ, ಕೀರ್ತಿ, ಲಿಖಿತ್ ಗೌಡ, ಮಂಜುನಾಥ್, ಮುಖಂಡರಾದ ಜಗದೀಶ್, ಶಿವಣ್ಣ, ಮಧುಕೆಂಚ, ಬಸವರಾಜು, ಈರೇಗೌಡ, ಚಂದ್ರಪ್ಪ, ಲೋಹಿತ್, ಶ್ರೀನಿವಾಸ್, ಪೂರ್ಣಿಮಾ, ಪ್ರದೀಪ್, ಶಿವರಾಜ್ ರಾವ್, ರಮೇಶ್, ಸತ್ಯಾನಂದ ವಿಟ್ಟು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.