ADVERTISEMENT

ಮೈಸೂರು| ಪ್ರತಿ ಮನೆಯಲ್ಲೂ ಸಂವಿಧಾನದ ಪ್ರತಿ ಇರಲಿ: ಪ್ರಾಂಶುಪಾಲ ಅಬ್ದುಲ್ ರಹಿಮಾನ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 12:53 IST
Last Updated 26 ಜನವರಿ 2026, 12:53 IST
   

ಮೈಸೂರು: ‘ಪ್ರತಿ ಮನೆಯಲ್ಲೂ ಭಾರತದ ಸಂವಿಧಾನದ ಪ್ರತಿ ಇರಬೇಕು’ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಹೇಳಿದರು.

ಕಾಲೇಜಿನ ಆವರಣದಲ್ಲಿ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸಂವಿಧಾನದಂತಹ ಶ್ರೇಷ್ಠ ಗ್ರಂಥವನ್ನು ಇಟ್ಟುಕೊಳ್ಳುವುದು ಮಾನವ ಶ್ರೇಷ್ಠತೆಯ ಸಂಕೇತ’ ಎಂದರು.

‘ಸಂವಿಧಾನವು ಪ್ರತಿ ಪ್ರಜೆಯನ್ನೂ ಜಾತ್ಯತೀತ ಮತ್ತು ಸಮಾನವಾಗಿ ಕಾಣುತ್ತದೆ. ಭಾರತೀಯ ಎಂಬ ಸ್ಥಾನ ನೀಡಿ ಮಾನ್ಯ ಮಾಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಬಾಳಬೇಕು. ಆಗ, ಸಹಿಷ್ಣುತೆ, ಸಮಾನತೆ, ಸಹಬಾಳ್ವೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಮುಖ್ಯಅತಿಥಿಗಳಾಗಿದ್ದ ಶ್ರೀಪಾದ್ ಎಚ್.ಆರ್. ಮತ್ತು ರೆಹಮತ್ ಉಲ್ಲಾ ಜಿ., ಅಧ್ಯಾಪಕ ಸಂಘದ ಕಾರ್ಯದರ್ಶಿ ರಮೇಶ ಕೆ.ಎಲ್. ಮಾತನಾಡಿದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಖಜಾಂಚಿ ಬೃಂದಾ ಎನ್., ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಬೃಂದಾ ಪಾಲ್ಗೊಂಡಿದ್ದರು.

ಹಾಸ್ಟೆಲ್‌ನಲ್ಲೂ ಆಚರಣೆ: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಧ್ವಜಾರೋಹಣ ನೆರವೇರಿಸಿದರು.

ನಿಲಯಪಾಲಕಿ ಪದ್ಮಾ ಸಿ., ವಿದ್ಯಾರ್ಥಿನಿಲಯ ಸಮಿತಿ ಸದಸ್ಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.