ಮೈಸೂರು: ಇಲ್ಲಿನ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರ ನೆನಪಿನ ರಾಜ್ಯಮಟ್ಟದ ಲೇಖನ ಸ್ಪರ್ಧೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ.
‘ಹಿಂದೂ ಸಮಾಜದಲ್ಲಿನ ಮೂಢನಂಬಿಕೆ ದೇಶದ ಅಭಿವೃದ್ಧಿಗೆ ಮಾರಕವೇ–ಪೂರಕವೇ?’ ಎಂಬ ವಿಷಯದ ಕುರಿತು ಲೇಖನ ಸಲ್ಲಿಸಬೇಕು. ಮೂರು ಅತ್ಯುತ್ತಮ ಲೇಖನಗಳಿಗೆ ರಾಮದಾಸ್ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು.
ಲೇಖನವು ನಾಲ್ಕು ಪುಟಗಳನ್ನು ಮೀರಬಾರದು. ಕನ್ನಡದಲ್ಲಿರಬೇಕು ಹಾಗೂ ವಿಷಯಕ್ಕೆ ಮಾತ್ರವೇ ಸಂಬಂಧಿಸಿರಬೇಕು. ಜೂನ್ 14ರೊಳಗೆ ತಲುಪುವಂತೆ – ಅನುದಿನ ನಿಲಯ, ಇಡಬ್ಲ್ಯುಎಸ್ 155, 10ನೇ ಕ್ರಾಸ್, ಗಂಗೋತ್ರಿ ಲೇಔಟ್, ಮೈಸೂರು–09– ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಮೊ.ಸಂ.70194 41509 ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.